ಮಂಡ್ಯ:ಮುಖ್ಯಮಂತ್ರಿ ಬದಲಾವಣೆ ಮಾಡ್ತಾರೋ ಅಥವಾ ಇಲ್ಲವೋ ನಿರ್ಧಾರ ಅವರದ್ದಾಗಿದೆ. ಆದ್ರೆ, ನಾನು ಮಾಧ್ಯಮದಲ್ಲಿ ನೋಡಿದ್ದೇನೆ, ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರ ಹೈಕಮಾಂಡ್ ನಿರ್ಧಾರ ಎಂದರು.
ಸಿಎಂ ಬದಲಾವಣೆ ಅವರ ಹೈಕಮಾಂಡ್ ನಿರ್ಧಾರ : ಮಾಜಿ ಸಚಿವ ಚಲುವರಾಯಸ್ವಾಮಿ - ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆ
ಹೈಕಮಾಂಡ್ ಈ ರಾಜ್ಯವನ್ನ ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಜೀರೊ ಇದ್ರು ಅಲ್ಲಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನ ಕರ್ನಾಟಕಕ್ಕೆ ನೀಡಿಲ್ಲ. ದಕ್ಷಿಣ ಭಾರತದಲ್ಲಿ ಎರಡೂ ಬಾರಿ ಆಡಳಿತ ಮಾಡಲು ಅವಕಾಶ ಕೊಟ್ಟಿದ್ದು ನಮ್ಮ ಜನರು. 25 ಜನ ಎಂಪಿ ಅವರನ್ನ ಗೆಲ್ಲಿಸಿಕೊಟ್ಟರೂ ಪ್ರಾಮುಖ್ಯತೆ ಕೊಟ್ಟಿಲ್ಲ..
ಮಾಜಿ ಸಚಿವ ಚಲುವರಾಯಸ್ವಾಮಿ
ಹೈಕಮಾಂಡ್ ಈ ರಾಜ್ಯವನ್ನ ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಜೀರೊ ಇದ್ರು ಅಲ್ಲಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನ ಕರ್ನಾಟಕಕ್ಕೆ ನೀಡಿಲ್ಲ. ದಕ್ಷಿಣ ಭಾರತದಲ್ಲಿ ಎರಡೂ ಬಾರಿ ಆಡಳಿತ ಮಾಡಲು ಅವಕಾಶ ಕೊಟ್ಟಿದ್ದು ನಮ್ಮ ಜನರು. 25 ಜನ ಎಂಪಿ ಅವರನ್ನ ಗೆಲ್ಲಿಸಿಕೊಟ್ಟರೂ ಪ್ರಾಮುಖ್ಯತೆ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾವು ಏನು ಒತ್ತಾಯ ಮಾಡಿದ್ರೂ ಪ್ರಯೋಜನವಿಲ್ಲ. ಮೂರು ದಿನದಲ್ಲಿ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯುತ್ತಾರಾ?, ಅಥವಾ ಹೊಸ ಸಿಎಂ ಬರ್ತಾರಾ ಕಾದು ನೋಡೋಣ ಎಂದರು.