ಮಂಡ್ಯ : ಗಣೇಶ ಮೂರ್ತಿ ನಿಮಜ್ಜನದ ವೇಳೆ ಕೆರೆಯಲ್ಲಿ ಕಳೆದು ಹೋಗಿದ್ದ ಚಿನ್ನದ ಸರವನ್ನು ರೋಬೋ ಮಂಜೇಗೌಡರ ರೋಬೋ ಹುಡುಕಿಕೊಟ್ಟು ದಾಖಲೆ ಬರೆದಿದೆ.
ರೋಬೋ ಸಹಾಯದಿಂದ ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಪತ್ತೆ.. - ರೋಬೋ ಚಿನ್ನದ ಸರ ಪತ್ತೆ
ಗಣೇಶ ಮೂರ್ತಿ ನಿಮಜ್ಜನದ ವೇಳೆ ಕೆರೆಯಲ್ಲಿ ಕಳೆದು ಹೋಗಿದ್ದ 22 ಗ್ರಾಂ ಚಿನ್ನದ ಸರವನ್ನು ರೋಬೋ ಬಳಸಿ ಕೆರೆ ತಳದಲ್ಲಿ ಶೋಧನೆ ನಡೆಸಿ ಕಳೆದಿದ್ದ ಚಿನ್ನದ ಸರ ಪತ್ತೆ ಮಾಡಲಾಗಿದೆ.
ರೋಬೋ ಸಹಾಯದಿಂದ ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಪತ್ತೆ
ಕೆ ಆರ್ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ರೈತ ವಿಜ್ಞಾನಿ ರೋಬೋ ಮಂಜೇಗೌಡರ ಅನ್ವೇಷಣೆಯ ರೋಬೋದ ಸಹಾಯದಿಂದ ಕಳೆದು ಹೋಗಿದ್ದ 22 ಗ್ರಾಂ ಚಿನ್ನದ ಸರ ಪತ್ತೆ ಮಾಡಲಾಯಿತು. ನೀರಿನಲ್ಲಿ ಮುಳುಗಿದವರನ್ನು ಪತ್ತೆ ಹಚ್ಚಲು ರೋಬೋವನ್ನು ಮಂಜೇಗೌಡರು ತಯಾರು ಮಾಡಿದ್ದರು. ರೋಬೋ ಬಳಸಿ ಕೆರೆ ತಳದಲ್ಲಿ ಶೋಧನೆ ನಡೆಸಿ ಕಳೆದಿದ್ದ ಚಿನ್ನದ ಸರ ಪತ್ತೆ ಮಾಡಲಾಗಿದೆ. ಮಂಜೇಗೌಡರ ರೋಬೋ ಕಾರ್ಯಾಚರಣೆಗೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.