ಕರ್ನಾಟಕ

karnataka

ETV Bharat / state

ಸಕ್ಕರೆ ಜಿಲ್ಲೆಯಲ್ಲಿ ಮತ್ತೆ ಇಬ್ಬರು ರೈತರಿಂದ ಆತ್ಮಹತ್ಯೆ - ಮಂಡ್ಯ

ಸಕ್ಕರೆ ಜಿಲ್ಲೆಯಲ್ಲಿ ರೈತರ ಮರಣಮೃದಂಗ ನಿಲ್ಲುತ್ತಿಲ್ಲ. ಇಂದೂ ಕೂಡ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೈತ

By

Published : Aug 6, 2019, 1:32 PM IST

ಮಂಡ್ಯ: ಸಕ್ಕರೆ ಜಿಲ್ಲೆಯಲ್ಲಿ ರೈತರ ಮರಣಮೃದಂಗ ನಿಲ್ಲುತ್ತಿಲ್ಲ. ಇಂದೂ ಕೂಡ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ರೈತ ಯೋಗೇಶ್ (45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮದ್ದೂರು ತಾಲೂಕಿನ ಚಿಕ್ಕದೊಡ್ಡಿ ಗ್ರಾಮದ ಲೋಕೇಶ್ (42) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 2 ಎಕರೆ ಜಮೀನು ಹೊಂದಿದ್ದ ರೈತ ಕೃಷಿಗಾಗಿ 6 ಲಕ್ಷ ಸಾಲ ಮಾಡಿದ್ದು, ಸಾಲದ ಒತ್ತಡ ಹೆಚ್ಚಾಗಿದ್ದರಿಂದ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಲೋಕೇಶ್ ಕೂಡ ಎರಡು ಎಕರೆ ಜಮೀನು ಹೊಂದಿದ್ದು, ಕೃಷಿಗಾಗಿ 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಸಾಧ್ಯವಾಗದೇ ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಹಾಗೂ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ABOUT THE AUTHOR

...view details