ಮಂಡ್ಯ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಿ. ಹೊಸೂರು ಬಳಿ ನಡೆದಿದೆ.
ಮನೆಯಲ್ಲಿ ಯಾಕೆ ಜಗಳ ಮಾಡ್ಕೊಂಡನೋ ಏನೋ.. ಕೊನೆಗೆ ಅವನಿಗೆ ಬದುಕೋದೇ ಇಷ್ಟವಿರಲಿಲ್ಲ
ಮನೆಯಲ್ಲಿ ಜಗಳ ಮಾಡಿಕೊಂಡು ಬಂದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಧನರಾಜು
ಮಂಡ್ಯದ ಸ್ವರ್ಣಸಂದ್ರ ನಿವಾಸಿ ಧನರಾಜು (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ರಾತ್ರಿ ಮನೆಯಲ್ಲಿ ಜಗಳ ಮಾಡಿಕೊಂಡು ಬಂದ ಧನರಾಜು, ಜಮೀನೊಂದರ ಬಳಿ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಗೆಶವ ಪರೀಕ್ಷೆ ರವಾನಿಸಲಾಗಿದ್ದು,ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.