ಮಂಡ್ಯ :ಜಿಲ್ಲಾ ರೈತ ಸಂಘದ ಬಲವರ್ಧನೆ ಹಾಗೂ ರೈತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ರೈತ ಸಂಘ ನಿರ್ಧಾರ ಮಾಡಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಶಿಬಿರಗಳನ್ನು ನಡೆಸಿ ಯುವಕರನ್ನು ಸೆಳೆಯಲು ರೈತ ಸಂಘ ಮುಂದಾಗಿದೆ.
ಮಂಡ್ಯದಲ್ಲಿ ಯುವಕರನ್ನು ಸೆಳೆಯಲು ಮುಂದಾದ ರೈತ ಸಂಘ.. - ಮಂಡ್ಯ
ಜಿಲ್ಲಾ ರೈತ ಸಂಘದ ಬಲವರ್ಧನೆ ಹಾಗೂ ರೈತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ರೈತ ಸಂಘ ನಿರ್ಧಾರ ಮಾಡಿದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ ಶಿಬಿರಗಳನ್ನು ನಡೆಸಿ ಯುವಕರನ್ನು ಸೆಳೆಯಲು ಮುಂದಾಗಿದೆ.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿದ ರೈತ ಸಂಘದ ಪ್ರಮುಖರು, ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮುಖಂಡರಾದ ದರ್ಶನ್ ಪುಟ್ಟಣ್ಣಯ್ಯ, ಸುರೇಶ್, ಬೊಮ್ಮೇಗೌಡ, ಕೆಂಪುಗೌಡ, ತಮ್ಮಯ್ಯ ಸೇರಿದಂತೆ ಹಲವು ಪ್ರಮುಖರು ಸಭೆ ಮಾಡಿ ನಿರ್ಧಾರ ತೆಗೆದುಕೊಂಡರು.
ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ನಾಲೆಗಳಿಗೆ ನೀರು ಬಿಡುವಂತೆ ಮನವಿ ಸಲ್ಲಿಸುವುದು ಹಾಗೂ ಜಿಲ್ಲೆಯಾದ್ಯಂತ ರಸ್ತೆ ತಡೆ ಚಳವಳಿ ಮುಂದುವರಿಸಲು ನಿರ್ಧಾರ ಮಾಡಲಾಯಿತು. ಮೈಶುಗರ್ ಹಾಗೂ ಪಿಎಸ್ಎಸ್‌ಕೆ ಪ್ರಾರಂಭ ಮಾಡಬೇಕು. ಪ್ರಾರಂಭ ಮಾಡುವ ತನಕ ಕಟಾವಿಗೆ ಬಂದಿರುವ ಕಬ್ಬನ್ನು ಬೇರೆ ಕಂಪನಿಗಳಿಗೆ ಸಾಗಿಸಲು ಜಿಲ್ಲಾಧಿಕಾರಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಲು ಇದೇ ವೇಳೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.