ಕರ್ನಾಟಕ

karnataka

ETV Bharat / state

ಸುಮಲತಾ ಅಂಬರೀಶ್ ಹೆಸರಿನಲ್ಲಿ ನಕಲಿ ಖಾತೆ: ಕ್ರಮದ ಎಚ್ಚರಿಕೆ

ಸಂಸದೆ ಸುಮಲತಾ ಹೆಸರಿನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದಿರುವ ಹಿನ್ನೆಲೆ ಗಮನಕ್ಕೆ ತರುವಂತೆ ಅಭಿಮಾನಿಗಳಿಗೆ ಫೇಸ್​​ಬುಕ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಮಲತಾ ಅಂಬರೀಶ್

By

Published : Aug 23, 2019, 7:12 AM IST

ಮಂಡ್ಯ:ಸಂಸದೆ, ನಟಿ ಸುಮಲತಾ ಅಂಬರೀಶ್‌ಗೆ ಫೇಸ್‌ಬುಕ್ ನಕಲಿ ಖಾತೆಯ ಕಿರಿಕಿರಿ ಎದುರಾಗಿದೆ.

ಸುಮಲತಾ ಹೆಸರಿನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದಿರುವ ಹಿನ್ನೆಲೆ ಗಮನಕ್ಕೆ ತರುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿರುವ ಸುಮಲತಾ ಅಂಬರೀಶ್, ತಮ್ಮದು ಒಂದೇ ಖಾತೆ ಇರೋದು. ನನ್ನ ಹೆಸರಿನ ಬೇರೆ ಖಾತೆಗಳು ಸೃಷ್ಟಿಯಾದರೆ ಕೂಡಲೇ ಗಮನಕ್ಕೆ ತನ್ನಿ. ಸೈಬರ್ ಪೊಲೀಸರ ಗಮನಕ್ಕೆ ತಂದು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನಕಲಿ ಕುರಿತು ಗಮನಕ್ಕೆ ತರುವಂತೆ ಅಭಿಮಾನಿಗಳಿಗೆ ಸುಮಲತಾ ಮನವಿ

ನಕಲಿ ಖಾತೆಗಳ ಬಗ್ಗೆ ತಿಳಿಸಿರುವ ಸುಮಲತಾ ಅಂಬರೀಶ್, ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅದರೆ ನೂತನ ಸಂಸದರಿಗೆ ಮಾತ್ರ ಸಾಮಾಜಿಕ ಜಾಲತಾಣದ ನಕಲಿ ಖಾತೆಗಳು ಕಿರಿಕಿರಿ ಮಾಡಿದೆ.

ABOUT THE AUTHOR

...view details