ಮಂಡ್ಯ:ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಬರುವ ಶಾಸಕರನ್ನು ತಡೆಯಲು ಚುನಾವಣೆ ಮೂಲಕ ಅವ್ರಿಗೆ ಭಯ ಹುಟ್ಟಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಟಾಂಗ್ ನೀಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಅವರ ಪಕ್ಷದ ಶಾಸಕರನ್ನು ಎದುರಿಸಲು ಹೀಗೆ ಭಯ ಹುಟ್ಟಿಸುತ್ತಿದ್ದಾರೆ. ನಮಗೆ ಚುನಾವಣೆಯ ಭಯವಿಲ್ಲ. ಯಾವಾಗ ಬಂದರೂ ಎದುರಿಸುತ್ತೇವೆ. ನಾವು ಸರ್ಕಾರದಲ್ಲಿ ಪೂರ್ಣಾವಧಿ ಪೂರೈಸುತ್ತೇವೆ ಎಂದು ಹೇಳಿದರು.