ಮಂಡ್ಯ:ಯಾವುದೇ ರೋಗ ಲಕ್ಷಣಗಳಿಲ್ಲದ ಗ್ರಾಮೀಣ ಭಾಗದ ಸೋಂಕಿತರನ್ನು ಹೋಂ ಐಸೊಲೇಷನ್ ಮಾಡುವುದು ಸರಿಯಲ್ಲ. ಅವರನ್ನೂ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಿ ಚಿಕಿತ್ಸೆ ನೀಡುವುದು ಉತ್ತಮ ಎಂದು ಶಾಸಕ ಡಿ.ಸಿ. ತಮ್ಮಣ್ಣ ಸಲಹೆ ನೀಡಿದ್ದಾರೆ.
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ರೋಗ ಲಕ್ಷಣಗಳಿಲ್ಲದವರನ್ನು ಹೋಂ ಐಸೊಲೇಷನ್‌ಗೆ ಒಳಪಡಿಸಿ ನಿಗಾ ಇರಿಸಲಾಗುತ್ತಿದೆ. ಆದರೆ, ಅವರೆಲ್ಲರೂ ಅಜಾಗರೂಕತೆ ತೋರುತ್ತಿದ್ದಾರೆ. ಸೋಂಕಿತರೇ ಮಾರುಕಟ್ಟೆಗೆ ಬಂದು ಸಾಮಗ್ರಿಗಳನ್ನು ಖರೀದಿಸುವುದು, ಹೊರಗಡೆ ಓಡಾಡುವುದು ಮಾಡುತ್ತಿದ್ದಾರೆ. ಇದರಿಂದ ಮತ್ತಷ್ಟು ಸೋಂಕು ಹೆಚ್ಚುವ ಸಾಧ್ಯತೆಯಿದೆ ಎಂದರು.