ಕರ್ನಾಟಕ

karnataka

ETV Bharat / state

2ನೇ ಬಾರಿಗೆ ಚಿತ್ರಮಂದಿರಗಳು ಬಂದ್​: ಸಂಕಷ್ಟದಲ್ಲಿ ಮಾಲೀಕರು, ಕಾರ್ಮಿಕರು

ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ 2ನೇ ಬಾರಿಗೆ ಚಿತ್ರಮಂದಿರಗಳು ಬಂದ್ ಆಗಿರುವುದರಿಂದ ಮಾಲೀಕರು ಹಾಗೂ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ.

Mandya
ಕರ್ಫ್ಯೂ ಎಫೆಕ್ಟ್​: ಸಂಕಷ್ಟದಲ್ಲಿ ಚಿತ್ರಮಂದಿರ ಮಾಲೀಕರು ಮತ್ತು ಕಾರ್ಮಿಕರು

By

Published : May 3, 2021, 8:48 AM IST

ಮಂಡ್ಯ:ಜನರಿಗೆ ಮನೋರಂಜನೆಯ ತಾಣವಾದ ಚಿತ್ರಮಂದಿರಕ್ಕೆ ಕೊರೊನಾದಿಂದ ಬಹುದೊಡ್ಡ ಹೊಡೆತ ಬಿದ್ದಿದೆ. ಚಿತ್ರಮಂದಿರವನ್ನೇ ನಂಬಿ ಜೀವನ ನಡೆಸುತ್ತಿದ್ದ ಮಾಲೀಕರ ಕಷ್ಟ ಒಂದೆಯಾದರೆ, ಕಾರ್ಮಿಕರು ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ.

ಕರ್ಫ್ಯೂ ಎಫೆಕ್ಟ್​: ಸಂಕಷ್ಟದಲ್ಲಿ ಚಿತ್ರಮಂದಿರ ಮಾಲೀಕರು, ಕಾರ್ಮಿಕರು

ಕಳೆದ ವರ್ಷದಿಂದ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಮಹಾಮಾರಿಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಬಹುತೇಕ ವ್ಯಾಪಾರ, ವಹಿವಾಟು ನಷ್ಟದಲ್ಲಿದೆ. ಕಳೆದ ಬಾರಿ ಲಾಕ್‌ಡೌನ್​ನಿಂದ 11 ತಿಂಗಳು ಥಿಯೇಟರ್ ಬಂದ್ ಆಗಿತ್ತು. ಪರಿಣಾಮ, ಲಕ್ಷಾಂತರ ರೂ.ನಷ್ಟ ಅನುಭವಿಸಿದ್ದ ಚಿತ್ರಮಂದಿರ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಪಡೆದಿದ್ದರು.

ಕಳೆದ 2 ತಿಂಗಳಿನಿಂದ ಪ್ರಾರಂಭದಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಿದ ಸರ್ಕಾರ ನಂತರದ ದಿನಗಳಲ್ಲಿ ಥಿಯೇಟರ್‌ಗಳ ಸಂಪೂರ್ಣ ಭರ್ತಿಗೆ ಅನುಮತಿ ನೀಡಿತ್ತು. ಬಳಿಕ ನಟ ದರ್ಶನ್‌ ಅಭಿನಯದ 'ರಾಬರ್ಟ್‌', ಪುನೀತ್‌ ನಟನೆಯ 'ಯುವರತ್ನ', ಧ್ರುವಸರ್ಜಾ ಅವರ 'ಪೊಗರು' ಸೇರಿದಂತೆ ಇನ್ನಿತರ ಚಿತ್ರಗಳು ಬಿಡುಗಡೆಗೊಂಡು ಯಶಸ್ವಿಯಾಗಿದ್ದವು. ಎಲ್ಲವೂ ಸರಿಹೋಗುತ್ತಿದೆ ಎನ್ನುವಷ್ಟರಲ್ಲಿ ಬಂದು ಅಪ್ಪಳಿಸಿದ ಕೊರೊನಾ 2ನೇ ಅಲೆ ಸಿನಿರಂಗವನ್ನೇ ತಲ್ಲಣಗೊಳಿಸಿದೆ.

ಜಿಲ್ಲೆಯ ಸಂಜಯ, ಗುರುಶ್ರೀ, ಮಹಾವೀರ, ಸಿದ್ಧಾರ್ಥ, ನಂದ, ಜಯಲಕ್ಷ್ಮೀ ಸಾತನೂರಿನ ವೆಂಕಟೇಶ್ವರ ಚಿತ್ರಮಂದಿರಗಳು ಮುಚ್ಚಿವೆ. ಹಾಗಾಗಿ ಚಿತ್ರಮಂದಿರದ ಮಾಲೀಕರು ವಿದ್ಯುತ್‌ ಬಿಲ್‌ ಮನ್ನಾ, ತೆರಿಗೆ ವಿನಾಯಿತಿ ನೀಡಿದರೆ ಅನುಕೂಲವಾಗಲಿದೆ. ಚಿತ್ರಮಂದಿರಗಳ ಕಾರ್ಮಿಕರ ಸಮಸ್ಯೆಗಳಿಗೂ ಸ್ಪಂದಿಸ‌ಬೇಕಾಗಿದೆ. ಕೆಲಸವಿಲ್ಲದೆ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರ ಇತ್ತ ಗಮನಹರಿಸಬೇಕು ಎಂದು ಮಹಾವೀರ ಚಿತ್ರಮಂದಿರದ ಮ್ಯಾನೇಜರ್ ರಾಮು ಮನವಿ ಮಾಡಿದರು.

ABOUT THE AUTHOR

...view details