ಮಂಡ್ಯ:ನಾಟಕ, ಥಳಕು ಇಲ್ಲದ ರಾಜಕಾರಣಿ ಸಿದ್ದರಾಮಯ್ಯ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. ಡಾ. ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ನಾಟಕ, ಗಿಮಿಕ್, ಥಳಕು ಕಲಿತರೆ ಉತ್ತಮ ರಾಜಕಾರಣಿ ಆಗಬಹುದು. ಆದರೆ ಸಿದ್ದರಾಮಯ್ಯ, ನಾವು ಅದನ್ನ ಕಲಿಯಲಿಲ್ಲ. ಇನ್ನು ಜನರೂ ಕೂಡ ಅದನ್ನ ಕಲಿಸಲಿಲ್ಲ. ಹೀಗಾಗಿ ರಾಜಕೀಯವಾಗಿ ಆ ರೀತಿ ನಡೆದುಕೊಳ್ಳಲು ನಮಗೆ ಇಂದಿಗೂ ಸಾಧ್ಯವಿಲ್ಲ ಎಂದರು.
ಜಿಲ್ಲೆಯ ಜನ ದುಡುಕಿನ ನಿರ್ಧಾರ ಮಾಡಬಾರದು. ಅದರಿಂದ ಬೇರೆಯವರಿಗಿಂತ ನಮಗೇ ಹೆಚ್ಚಿನ ತೊಂದರೆ ಆಗುತ್ತೆ. ಅದನ್ನು ಈಗ ನಾವು ನೋಡ್ತಿದ್ದೇವೆ. ಅದಕ್ಕಾಗಿ ಯೋಚನೆ ಮಾಡಿ, ವಿವೇಚನೆಯಿಂದ ನಿರ್ಧಾರ ಮಾಡಿ ಎಂದರು.