ಕರ್ನಾಟಕ

karnataka

ETV Bharat / state

ಶ್ರೀರಂಗಪಟ್ಟಣ: ಚಾಮುಂಡೇಶ್ವರಿ ದೇವಿಗೆ ಚಿರೋಟಿ ಅಲಂಕಾರ - ವರಾತ್ರಿಯಲ್ಲಿ ಖಾದ್ಯ

ನವರಾತ್ರಿಯ ಮೊದಲ ದಿನ ಚಕ್ಕುಲಿ ಅಲಂಕಾರದಿಂದ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿ ವಿಗ್ರಹ ಇಂದು ಚಿರೋಟಿಯಿಂದ ಅಲಂಕರಿಸಲಾಗಿದೆ.

chamundeshwari-idol-decorated-from-chiroti-for-second-day-of-navaratri-fest
ಚಾಮುಂಡೇಶ್ವರಿಗೆ ಚಿರೋಟಿ ಅಲಂಕಾರ

By

Published : Oct 8, 2021, 1:36 PM IST

ಮಂಡ್ಯ: ನವರಾತ್ರಿಯ ಎರಡನೇ ದಿನದ ಅಂಗವಾಗಿ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಿಗೆ ಚಿರೋಟಿಯಿಂದ ಅಲಂಕಾರ ಮಾಡಲಾಗಿದೆ. ಪ್ರತೀವರ್ಷ ದೇವಾಲಯದಲ್ಲಿ ನವರಾತ್ರಿ ಸಂದರ್ಭ ದೇವರ ವಿಗ್ರಹ ಸೇರಿದಂತೆ ಗರ್ಭಗುಡಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ಈ ಬಾರಿಯ ನವರಾತ್ರಿಯಲ್ಲಿ ಖಾದ್ಯ ಪದಾರ್ಥಗಳ ಅಲಂಕಾರ ಗಮನ ಸೆಳೆಯುತ್ತಿದೆ. ನವರಾತ್ರಿಯ ಮೊದಲ ದಿನ ಚಕ್ಕುಲಿಯಿಂದ ಅಲಂಕಾರ ಮಾಡಲಾಗಿತ್ತು. ಇಂದು ಎರಡನೇ ದಿನವಾದ ಹಿನ್ನೆಲೆಯಲ್ಲಿ ಚಿರೋಟಿಯಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ಇದನ್ನೂ ಓದಿ:ತಲಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕೊರೊನಾ ನಡುವೆ ಸಕಲ ತಯಾರಿ

ABOUT THE AUTHOR

...view details