ಕರ್ನಾಟಕ

karnataka

ETV Bharat / state

ಕೆಆರ್​ಎಸ್​​ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಮಂಜುಶ್ರೀ, ನಾಲೆಗಳಿಗೆ ನೀರು ಬಿಡುವಂತೆ ಜಲಸಂಪನ್ಮೂಲ ಇಲಾಖೆಗೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಲಾಖೆ, KRS ಅಣೆಕಟ್ಟೆ ಸೆಂಟ್ರಲ್ ವಾಟರ್ ಮ್ಯಾನೇಜ್‍ಮೆಂಟ್ ಅಥಾರಿಟಿಯ ನಿಯಂತ್ರಣದಲ್ಲಿದೆ. ಅಥಾರಿಟಿ ಅನುಮತಿ ಇಲ್ಲದೇ ನೀರು ಬಿಡಲು ಸಾಧ್ಯವಿಲ್ಲ ಎಂದಿದೆ.

By

Published : Jun 23, 2019, 3:31 PM IST

ಕೆಆರ್​ಎಸ್​​ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ

ಮಂಡ್ಯ : ಕೆ.ಆರ್.ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಸ್ಪಷ್ಟಪಡಿಸಿದ್ದಾರೆ.

ಕೆ.ಆರ್.ಎಸ್‌ನಿಂದ ವಿಸಿ ಹಾಗೂ ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹರಿಸುವಂತೆ ರೈತ ಸಂಘದ ಮುಖಂಡರು ನಿರಂತರ ಹೋರಾಟ ಶುರು ಮಾಡಿದ್ದರು‌. ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೀರು ಬಿಡುವಂತೆ ಮನವಿ ಮಾಡಿದ್ದರು. ಡಿಸಿ ಮನವಿಗೆ ಸ್ಪಂದಿಸಿದ ಜಲ ಸಂಪನ್ಮೂಲ ಇಲಾಖೆ, ಕೇಂದ್ರದತ್ತ ಬೊಟ್ಟು ಮಾಡಿ ನುಣುಚಿಕೊಂಡಿದೆ.

KRS ಅಣೆಕಟ್ಟೆ ಸೆಂಟ್ರಲ್ ವಾಟರ್ ಮ್ಯಾನೇಜ್‍ಮೆಂಟ್ ಅಥಾರಿಟಿಯ ನಿಯಂತ್ರಣದಲ್ಲಿದೆ. ಅಥಾರಿಟಿ ಅನುಮತಿ ಇಲ್ಲದೇ ನೀರು ಬಿಡಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಉತ್ತರ ನೀಡಿದೆ. ಮಳೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿಗೆ ಮಾತ್ರ ನೀರು ಮೀಸಲಿಡುವುದು ಸೂಕ್ತವೆಂದು ತೀರ್ಮಾನ ಮಾಡಲಾಗಿದ್ದು. ಅಣೆಕಟ್ಟೆ ಒಳಹರಿವು ಹೆಚ್ಚಾದಲ್ಲಿ ನಾಲೆಗಳಿಗೆ ನೀರು ಹರಿಸಲು ಸಾಧ್ಯ ಎಂದು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details