ಕರ್ನಾಟಕ

karnataka

ETV Bharat / state

ಕೆಆರ್​​​ಎಸ್ ಉಳಿವಿಗಾಗಿ ಜುಲೈ 29ರಂದು ಮಂಡ್ಯ ಬಂದ್‌ಗೆ ಕರೆ - ಜೀವನಾಡಿ ಕೆಆರ್‌ಎಸ್ ಕಟ್ಟೆ

ಕೆಆರ್‌ಎಸ್ ಕಟ್ಟೆ ಉಳಿಸಿ ಎಂದು ಅಭಿಯಾನ ಆರಂಭಿಸಿರುವ ಕೆಆರ್​​ಎಸ್ ಉಳಿಸಿ‌ ಹೋರಾಟ ಸಮಿತಿಯು ಜುಲೈ 29ರಂದು ಮಂಡ್ಯ ಬಂದ್‌ಗೆ ಕರೆ ನೀಡಿದೆ.

Calling Mandya Band on July 29
ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆ

By

Published : Jul 25, 2020, 8:43 PM IST

ಮಂಡ್ಯ:ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಕಟ್ಟೆ ಉಳಿಸಿ ಎಂದು ಅಭಿಯಾನ ಆರಂಭಿಸಿರುವ ಕೆಆರ್​​ಎಸ್ ಉಳಿಸಿ‌ ಹೋರಾಟ ಸಮಿತಿಯು ಜುಲೈ 29ರಂದು ಮಂಡ್ಯ ಬಂದ್‌ಗೆ ಕರೆ ನೀಡಿದೆ.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಸಂಪೂರ್ಣವಾಗಿ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಬಂದ್​ ಕರೆ ನೀಡಲಾಗಿದೆ. ಸಮಿತಿ ಸದಸ್ಯರು ಇಂದು ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ ಬಂದ್​ ಕರೆಯ ನಿರ್ಧಾರ ಕೈಗೊಂಡರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೇಗೌಡ

ಸಭೆಯಲ್ಲಿ ರೈತ ಸಂಘ, ಪ್ರಗತಿಪರ ಹೋರಾಟಗಾರರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಬಂದ್‌ಗೆ ಪ್ರಗತಿಪರ ಸಂಘಟನೆಗಳು, ವರ್ತಕರು, ಆಟೋಚಾಲಕರ ಸಂಘ, ಕನ್ನಡ ಪರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ.

ABOUT THE AUTHOR

...view details