ಕರ್ನಾಟಕ

karnataka

ETV Bharat / state

ಬಿಜೆಪಿಯಿಂದ ಸ್ಪರ್ಧಿಸಿರುವ ಎಲ್ಲ ನಟಿಮಣಿಯರು ಮುನ್ನಡೆ... ಕಾಂಗ್ರೆಸ್​ನ ಊರ್ಮಿಳಾಗೆ ಹಿನ್ನಡೆ

ಇಂದು ದೇಶದಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಸಿನಿ ಲೋಕದ ದಿಗ್ಗಜರ ತಮ್ಮ ಸಿನಿ ಕ್ಷೇತ್ರದ ಜೊತಗೆ ರಾಜಕೀಯ ರಂಗದಲ್ಲೂ ತಮ್ಮದೇ ಆದ ಚಾಪು ಮೂಡಿಸಲು ಹೊರಟಿದ್ದಾರೆ. ಅಂತಹ ಕೆಲವು ನಟಿಮಣಿಯರ ಪ್ರಸ್ತುತ ಫಲಿತಾಂಶದ ವಿವಿರ ಇಲ್ಲಿದೆ.

BJP star actress

By

Published : May 23, 2019, 12:24 PM IST

Updated : May 23, 2019, 12:35 PM IST

ಹೈದರಾಬಾದ್​:ಇಂದು ದೇಶದಾದ್ಯಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಸಿನಿ ಲೋಕದ ದಿಗ್ಗಜರ ತಮ್ಮ ಸಿನಿ ಕ್ಷೇತ್ರದ ಜೊತಗೆ ರಾಜಕೀಯ ರಂಗದಲ್ಲೂ ತಮ್ಮದೇ ಆದ ಚಾಪು ಮೂಡಿಸಲು ಹೊರಟಿದ್ದಾರೆ. ಅಂತಹ ಕೆಲವು ನಟಿಮಣಿಯರ ಪ್ರಸ್ತುತ ಫಲಿತಾಂಶದ ವಿವರ ಇಲ್ಲಿದೆ.

ಹೇಮಾ ಮಾಲಿನಿ, ಜಯಪ್ರಧಾ, ಸುಮಾಲತಾ, ಸ್ಮೃತಿ ಇರಾನಿ ಸೇರಿದಂತೆ ಬಾಲಿವುಡ್​, ಸ್ಯಾಂಡಲ್​ವುಡ್​ನ ನಟಿಯರು ಕೇವಲ ನಟನೆಗೆ ಮಾತ್ರವಲ್ಲದೆ ರಾಜಕೀಯದಲ್ಲೂ ತಮ್ಮ ಭವಿಷ್ಯವನ್ನು ತಿಳಿಯಲು ಮುಂದಾಗಿದ್ದಾರೆ.

ಹೇಮಮಾಲಿನಿ ಮುನ್ನಡೆ

ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹೇಮಾ ಮಾಲಿನಿ ತಮ್ಮ ಪ್ರತಿಸ್ಪರ್ಧಿಯಾದ ಮೈತ್ರಿ ಅಭ್ಯರ್ಥಿ(ಆರ್​ಎಲ್​ಡಿ) ಕನ್ವರ್​ ನರೇಂದ್ರ ಸಿಂಗ್​ ಅವರ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಗೆದ್ದು ಎಂಪಿಯಾಗಿದ್ದ ಹೇಮಾರಿಗೆ ಸತತ ಎರಡನೇ ಬಾರಿಗೆ ಲೋಕಸಭೆಗೆ ಪ್ರವೇಶ ಪಡೆಯುವ ಅವಕಾಶವಿದೆ.

ಮುನ್ನಡೆಯಲ್ಲಿ ಮೋಹಕ ತಾರೆ ಜಯಪ್ರಧಾ

70 ದಶಕದ ಮೋಹಕ ತಾರೆ ಜಯಪ್ರಧಾ ತಮ್ಮ ನಟನೆಯಿಂದಲೆ ಸಿನಿರಸಿಕರ ಮನಸ್ಸು ಗೆದ್ದಂತಹ ನಟಿ. ಇವರು ರಾಂಪುರ್​ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಿದ್ದು, ಮತ ಎಣಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಎಸ್​ಪಿ ಪಕ್ಷದ ನಿಜಾಂ ಖಾನ್​ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ.

ಸ್ಮೃತಿ ಇರಾನಿ ಮುನ್ನಡೆ

ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿರುವ ಸ್ಮೃತಿ ಇರಾನಿ ಆರಂಭಿಕ ಹಂತದಿಂದಲೂ ಮುನ್ನಡೆ ಕಾಯ್ದುಕೊಂಡು ಅಚ್ಚರಿ ಮೂಡಿಸಿದ್ದಾರೆ.

ಮಂಡ್ಯದಲ್ಲಿ ಸುಮಾಲತಾ ಅಂಬರೀಶ್​ಗೆ ಮುನ್ನಡೆ

ಇಡೀ ದೇಶದಲ್ಲೇ ಹೈವೋಲ್ಟೇಜ್​ ಕ್ಷೇತ್ರಗಳಲ್ಲಿ ಒಂದಾದ ಮಂಡ್ಯದಲ್ಲಿ ರೆಬಲ್​ ಸ್ಟಾರ್​ ಅಂಬರೀಶ್​ ಪತ್ನಿ ಸುಮಲತಾ ಅಂಬರೀಶ್​​ ಅವರು ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್​ನ ಊರ್ಮಿಳಾ ಮಟೋಂಡ್ಕರ್​ಗೆ ಹಿನ್ನಡೆ

ಕಾಂಗ್ರೆಸ್​ನ ಊರ್ಮಿಳಾ
ಹಿಂದಿ ಸಿನಿಮಾದಲ್ಲಿ ಹೆಸರುಗಳಿಸಿರುವ ಕಾಂಗ್ರೆಸ್​ನ ಉರ್ಮಿಳಾ ಮಾತೋಂಡ್ಕರ್ ಮುಂಬೈ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಗೋಪಾಲ್​ ಶೆಟ್ಟಿ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ.
Last Updated : May 23, 2019, 12:35 PM IST

ABOUT THE AUTHOR

...view details