ಕರ್ನಾಟಕ

karnataka

ETV Bharat / state

ಸುಪಾರಿ ಕೊಟ್ಟು ದರೋಡೆಗೊಳಗಾದರು: ದೂರು ನೀಡಿ ಕಂಬಿ ಎಣಿಸಿದ ದಂಪತಿ - ಮಂಡ್ಯ ಲೆಟೆಸ್ಟ್ ನ್ಯೂಸ್

ಅಳಿಯನ ವಿರುದ್ಧ ಸುಪಾರಿ ಕೊಟ್ಟ ದಂಪತಿಯನ್ನೇ ದೋಚಿ ದರೋಡೆಕೋರರು ಪೊಲೀಸರ ಅತಿಥಿಯಾದ ಘಟನೆ ಮಳವಳ್ಳಿಯಲ್ಲಿ ನಡೆದಿದೆ. ವಿಚಾರ‌ ತಿಳಿದ ಪೊಲೀಸರು ಆರೋಪಿಗಳ ಜೊತೆ ದಂಪತಿಯನ್ನೂ ಜೈಲಿಗೆ ಕಳುಹಿಸಿದ್ದಾರೆ.

Arrested accused as well as who gave complaint in Mandya....what happend?
ಸುಪಾರಿ ಕೊಟ್ಟು ದರೋಡೆಗೆ ಒಳಗಾದರು: ದೂರು ನೀಡಿ ಕಂಬಿ ಎಣಿಸಿದ ದಂಪತಿ

By

Published : Feb 15, 2020, 10:09 AM IST

ಮಂಡ್ಯ: ಅಳಿಯನ ವಿರುದ್ಧ ಸುಪಾರಿ ಕೊಟ್ಟ ದಂಪತಿಯನ್ನೇ ದೋಚಿ ದರೋಡೆಕೋರರು ಪೊಲೀಸರ ಅತಿಥಿಯಾದ ಘಟನೆ ಮಳವಳ್ಳಿಯಲ್ಲಿ ನಡೆದಿದೆ. ದರೋಡೆಕೋರರ ವಿರುದ್ಧ ದೂರು ನೀಡಿದ ದಂಪತಿಯೂ ಈಗ ಕಂಬಿ ಹಿಂದೆ ಸೇರಿದ್ದಾರೆ.

ಸುಪಾರಿ ಕೊಟ್ಟು ದರೋಡೆಗೆ ಒಳಗಾದರು: ದೂರು ನೀಡಿ ಕಂಬಿ ಎಣಿಸಿದ ದಂಪತಿ

ಸುಪಾರಿ ಪಡೆದಿದ್ದ ಬೆಂಗಳೂರು ಮೂಲದ ಮಹದೇವ, ಕುಮಾರ, ಲೋಕೇಶ್, ಮೋಹನ್, ಲೋಕೇಶ್ ಬಂಧಿತ ದರೋಡೆಕೋರರಾಗಿದ್ದು, ಇವರ ಜೊತೆ ಸುಪಾರಿ ಕೊಟ್ಟ ಆರೋಪದಡಿ ವೆಂಕಟೇಶ್ ಮತ್ತು ಪುಟ್ಟತಾಯಮ್ಮ ಜೈಲು ಸೇರಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಪುಟ್ಟತಾಯಮ್ಮ ಪುತ್ರಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಕೋಪಗೊಂಡಿದ್ದ ದಂಪತಿ ಅಳಿಯನ ಕೊಲೆಗೆ ಸುಪಾರಿ ಕೊಟ್ಟು ಅರ್ಧ ಅಡ್ವಾನ್ಸ್ ನೀಡಿದ್ದರು.

ಆದರೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟ ಸುಪಾರಿ ತಂಡ ದಂಪತಿಯನ್ನೇ ಬೆದರಿಸಿ ದರೋಡೆ ಮಾಡಿದ್ದರು. ಪ್ರಕರಣ ಸಂಬಂಧ ದಂಪತಿ ಮಳವಳ್ಳಿ ಪೊಲೀಸರ ಮೊರೆ ಹೋಗಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರ‌ ತಿಳಿದ ಪೊಲೀಸರು ಆರೋಪಿಗಳ ಜೊತೆ ದಂಪತಿಯನ್ನೂ ಜೈಲಿಗೆ ಕಳುಹಿಸಿದ್ದಾರೆ.

ABOUT THE AUTHOR

...view details