ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಯುವಕನೇ ಜಿಗುಪ್ಸೆಯಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಂಡ್ಯ: ಬೆಂಕಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ - ನಾಗಮಂಗಲ ಯುವಕನ ಸಾವು ಸುದ್ದಿ
ನಾಗಮಂಗಲದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಂಕಿ ಹಚ್ಚಿರುವ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.
ಮಂಡ್ಯ ಕ್ರೈಮ್
ನಾಗಮಂಗಲ ಪಟ್ಟಣದ ರುದ್ರನ ಬೀದಿ ವಾಸಿ ಗೋವಿಂದಶೆಟ್ಟಿ ಮಗ ದಿಲೀಪ್ (22) ಎಂಬಾತನ ಶವ ಸುಟ್ಟ ರೀತಿಯಲ್ಲಿ ಪಡುವಲಪಟ್ಟಣ ರಸ್ತೆಯ ಸೂಳೆಕೆರೆ ತಟದಲ್ಲಿ ಸಿಕ್ಕಿದೆ.
ವಿಷಯ ತಿಳಿದು ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.