ಕರ್ನಾಟಕ

karnataka

ETV Bharat / state

ಮೋದಿ ನೇತೃತ್ವದಲ್ಲಿ ದೇಶದ ಆಡಳಿತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ : ಸಚಿವ ಸಿಟಿ ರವಿ

ದೇಶದಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಭಾರತದಲ್ಲಿ ಮಾತ್ರ ಆರ್ಥಿಕ ಹಿಂಜರಿತ ಇಲ್ಲ, ಎಲ್ಲಾ ದೇಶದಲ್ಲೂ ಇದೆ. ಇದಕ್ಕೆ ಮೋದಿ ಕಾರಣರಲ್ಲ. ಆರ್ಥಿಕ ಹಿಂಜರಿತದಲ್ಲಿ ನಾವು ಅಸಹಾಯಕರು. ಅದನ್ನು ಎದುರಿಸಬೇಕಾಗಿದೆ. ಹಣದುಬ್ಬರ ಮಿತಿಯಲ್ಲಿದೆ ಎಂದು ಸಮರ್ಥಿಸಿಕೊಂಡರು.

ಸಚಿವ ಸಿಟಿ ರವಿ

By

Published : Sep 10, 2019, 5:15 AM IST

ಮಂಡ್ಯ :ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆಡಳಿತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಉತ್ತಮ ಆಡಳಿತ ನೀಡುತ್ತಿದ್ದಾರೆ, ಎಂದು ಮೋದಿ ಆಡಳಿತದ 100 ದಿನದ ಬಗ್ಗೆ ಸಚಿವ ಸಿ.ಟಿ. ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಭಾರತದಲ್ಲಿ ಮಾತ್ರ ಆರ್ಥಿಕ ಹಿಂಜರಿತ ಇಲ್ಲ, ಎಲ್ಲಾ ದೇಶದಲ್ಲೂ ಇದೆ. ಇದಕ್ಕೆ ಮೋದಿ ಕಾರಣರಲ್ಲ. ಆರ್ಥಿಕ ಹಿಂಜರಿತದಲ್ಲಿ ನಾವು ಅಸಹಾಯಕರು. ಅದನ್ನು ಎದುರಿಸಬೇಕಾಗಿದೆ. ಹಣದುಬ್ಬರ ಮಿತಿಯಲ್ಲಿದೆ ಎಂದು ಸಮರ್ಥಿಸಿಕೊಂಡರು.

ಸಚಿವ ಸಿಟಿ ರವಿ

ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಕಳಂಕವಿಲ್ಲ, ನಮ್ಮ ವಿರೋಧಿಗಳಿಗೂ ಇದು ಗೊತ್ತು. ನಮ್ಮ ಪ್ರಾಮಾಣಿಕತೆ ಮೇಲೆ ಅನುಮಾನವೂ ಇಲ್ಲ. ಅತಿ ಹೆಚ್ಚು ವಿದೇಶಿ ವಿನಿಮಯ ಇರುವುದು ನಮ್ಮ ಸರ್ಕಾರದ ಅವಧಿಯಲ್ಲೇ. ಆರ್.ಬಿ.ಐ ಮೀಸಲು ನಿಧಿಯನ್ನು ಈ ಹಿಂದೆಯೂ ಬಳಸಲಾಗಿದೆ. ಅದು ದೇಶದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದೆ. ಈ ಹಿಂದೆ ದೇಶದ ಚಿನ್ನವನ್ನು ಅಡಮಾನ ಇಡಲಾಗಿತ್ತು. ಆದರೆ ಆ ದುಸ್ಥಿತಿ ಈಗ ಇಲ್ಲ ಎಂದರು.

ABOUT THE AUTHOR

...view details