ಮಂಡ್ಯ :ಕಳೆದ ನಾಲ್ಕು ವರ್ಷಗಳ ಹಿಂದೆ ಹಾಸ್ಯ ಕಲಾವಿದನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ 3 ವರ್ಷ ಸಂಸಾರ ಮಾಡಿ, ಕೈಕೊಟ್ಟು ಬೇರೊಂದು ಮದುವೆಯಾಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪ್ರೇಮಿಸಿ ಮದುವೆಯಾಗಿದ್ದ ರವಿ- ಬೇಬಿ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನ ಹುಂಡಿಯ ರವಿ ಖಾಸಗಿ ವಾಹಿನಿಯ ಹಾಸ್ಯ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯಾಗಿದ್ದರು. ಅಲ್ಲದೆ, ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ. ಈ ಸಮಯದಲ್ಲಿ ಮೈಸೂರು ಮೂಲದ ಬೇಬಿ ಎಂಬ ಕಲಾವಿದೆಯ ಜತೆಗೆ ಪ್ರೇಮಾಂಕುರವಾಗಿತ್ತು. ಕುಟುಂಬಸ್ಥರ ವಿರೋಧದ ನಡುವೆಯೂ 4 ವರ್ಷಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು.
ನಂತರ ಮೈಸೂರಿನ ಬಾಡಿಗೆ ಮನೆಯೊಂದರಲ್ಲಿ ನಾಲ್ಕು ವರ್ಷದಿಂದ ಈ ಜೋಡಿ ಸಂಸಾರ ನಡೆಸುತ್ತಿತ್ತು. ಅಲ್ಲದೆ, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ದಂಪತಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಈ ವೇಳೆ ಮದುವೆಗೆ ಗೈರಾಗಿದ್ದ ತಾಯಿಯನ್ನು ಕರೆಸಿ ಕಾರ್ಯಕ್ರಮದಲ್ಲೇ ಬೇಬಿಗೆ ಮತ್ತೊಮ್ಮೆ ತಾಳಿ ಕಟ್ಟಿದ್ದ ರವಿ.
ಪತ್ನಿ ಬೇಬಿ ಕುರಿತು ಹಾಸ್ಯ ಕಲಾವಿದ ರವಿ ಆರೋಪ ಈ ಸಮಯದಲ್ಲೇ ಕೊರೊನಾ ಅಲೆ ಕಾಣಿಸಿಕೊಂಡಿದ್ದು, ರವಿಗೆ ಕೆಲಸವಿಲ್ಲದಂತಾಯಿತು. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಪತ್ನಿ, ಮತ್ತೊಬ್ಬನ ಜತೆ ಲವ್ವಿಡವ್ವಿ ಶುರು ಮಾಡಿದ್ದಳಂತೆ.
ಬೇಬಿಯ ಕಳ್ಳಾಟ ಜಾಸ್ತಿ ದಿನಗಳವರೆಗೆ ಉಳಿಯಲಿಲ್ಲ. ಈ ವಿಚಾರ ರವಿಗೆ ತಿಳಿದು, ಪ್ರಶ್ನಿಸಿದಾಗ ನಿನ್ನ ಬಳಿ ದುಡ್ಡಿಲ್ಲ. ಅದಕ್ಕೆ ನಾನು ನಿನ್ನ ಬಿಟ್ಟು ಹೋಗ್ತೀನಿ ಅಂದ್ಲಂತೆ. ಅಲ್ಲದೆ, ಕೊರೊನಾದಿಂದಾಗಿ ತನಗೆ ಕೆಲಸ ಇಲ್ಲದಿದ್ದ ಅವಧಿಯಲ್ಲೇ ಇನ್ನೊಬ್ಬನನ್ನ ಪ್ರೇಮಿಸಿದ್ದಾಳೆ. ಈಗ ಆತನನ್ನೇ ಬೇಬಿ ಮದುವೆಯಾಗಿದ್ದಾಳೆ ಎಂದು ರವಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಉಂಡ ಮನೆಗೆ ಕನ್ನ.. ಶ್ರೀಮಂತರ ಮನೆಗಳಲ್ಲಿ ಕೈಚಳಕ ತೋರಿಸಿದ್ದ ಚಾಲಾಕಿ ಅರೆಸ್ಟ್
ಮದುವೆ ತಡೆಯಲು ಹೋದ ನನ್ನ ಮೇಲೆ ಪತ್ನಿ ಎರಡನೇ ಗಂಡ ಹಾಗೂ ಆಕೆ ತಮ್ಮನಿಂದ ಹಲ್ಲೆ ಮಾಡಿಸಿದ್ದಾಳೆ. ಹೀಗಾಗಿ, ತನಗಾದ ಮೋಸದಂತೆ ಮತ್ಯಾರಿಗೂ ಆಗಬಾರದು. ಆಕೆಗೆ ಶಿಕ್ಷೆ ಆಗಬೇಕು ಅಂತಾ ರವಿ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಶ್ರೀರಂಗಪಟ್ಟಣದ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.