ಮಂಡ್ಯ: ಅಸ್ತಿ ಬಿಡಿಲು ಬಂದ ಬೆಂಗಳೂರಿನ ವ್ಯಕ್ತಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಘೋಸಾಯ್ ಘಾಟ್‌ನಲ್ಲಿ ಶನಿವಾರ ನಡೆದಿದೆ.
ಅಸ್ತಿ ಬಿಡಲು ಬಂದು ಕಾವೇರಿಯಲ್ಲಿ ಕೊಚ್ಚಿಹೋದ ಯುವಕ - ಶ್ರೀರಂಗಪಟ್ಟಣ ಪೊಲೀಸ್ ಠಾಣೆ
ಕಾವೇರಿ ನದಿಯಲ್ಲಿ ಅಸ್ತಿ ಬಿಡಲು ಬಂದ ವ್ಯಕ್ತಿ ಕೊಚ್ಚಿ ಹೋಗಿರುವ ಘಟನೆ ಘೋಸಾಯ್ ಘಾಟ್‌ನಲ್ಲಿ ಶನಿವಾರ ನಡೆದಿದೆ.
ಶ್ರೀ ಪ್ರಸಾದ್
ಘಟನೆಯಲ್ಲಿ ಓರ್ವನ ರಕ್ಷಣೆ ಮಾಡಲಾಗಿದ್ದು, ಬೆಂಗಳೂರಿನ ಗವಿಪುರಂ ಶ್ರೀ ಪ್ರಸಾದ್ (31) ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಯಾಗಿದ್ದಾನೆ. ಶ್ರೀ ಪ್ರಸಾದ್ ಜೊತೆ ಬಂದಿದ್ದ ಆತನ ಭಾವ ಮಯೂರ್ ರಕ್ಷಣೆ ಮಾಡಲಾಗಿದೆ.
ಕೊಚ್ಚಿ ಹೋದ ಮೃತನ ಶವಕ್ಕಾಗಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯವರ ಸಹಾಯದೊಂದಿಗೆ ಹುಡುಕಾಟ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.