ಕರ್ನಾಟಕ

karnataka

By

Published : May 3, 2021, 7:36 AM IST

ETV Bharat / state

ಮಂಡ್ಯ ಜಿಲ್ಲೆಯಲ್ಲಿ 653 ಕೋವಿಡ್ ಕೇಸ್​ ಪತ್ತೆ: ಐವರು ಬಲಿ

ಮಂಡ್ಯ ಜಿಲ್ಲೆಯಲ್ಲಿ ಭಾನುವಾರ 653 ಮಂದಿಗೆ ಕೋವಿಡ್​ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ.

covid update
ಕೋವಿಡ್​ ಅಪ್ಡೇಟ್​

ಮಂಡ್ಯ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಗಿಂತ ಕೊರೊನಾ ಆರ್ಭಟ ಸ್ವಲ್ಪ ತಗ್ಗಿದ್ದು, ಭಾನುವಾರ 653 ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 32,350ಕ್ಕೆ ಏರಿಕೆಯಾಗಿದೆ. ನಿನ್ನೆ 835 ಮಂದಿ ಗುಣಮುಖರಾಗಿದ್ದು, ಈವರೆಗೆ 26,189 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 5939 ಏರಿಕೆಯಾಗಿದೆ. ನಿನ್ನೆ 5 ಮಂದಿ ಸೋಂಕಿಗೆ ಬಲಿಯಾಗಿದ್ದು, ಈವರೆಗೆ 220 ಮಂದಿ ಸಾವನ್ನಪ್ಪಿದ್ದಾರೆ.

ತಾಲೂಕುವಾರು ವಿವರ:

  • ಮಂಡ್ಯ-101
  • ಮದ್ದೂರು- 116
  • ಪಾಂಡವಪುರ- 185
  • ಶ್ರೀರಂಗಪಟ್ಟಣ-91
  • ಕೆ.ಆರ್.ಪೇಟೆ-64
  • ನಾಗಮಂಗಲ-91
  • ಹೊರ ಜಿಲ್ಲೆಯ 5 ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details