ಮಂಡ್ಯ: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮದ್ದೂರು ತಾಲೂಕಿನ ದುಂಡಳ್ಳಿ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
ಭೀಕರ ರಸ್ತೆ ಅಪಘಾತ: ಮೂವರು ಯುವಕರ ದುರ್ಮರಣ - 3-youth-died-in-accident
ತುಮಕೂರು - ಮದ್ದೂರು ಹೆದ್ದಾರಿಯಲ್ಲಿ ಪ್ಯಾಸೆಂಜರ್ ಆಟೋಗೆ ಲಾರಿ ಹಿಂದಿನಿಂದ ಡಿಕ್ಕಿಹೊಡೆದು ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.
3-youth-died-in-accident
ತುಮಕೂರು - ಮದ್ದೂರು ಹೆದ್ದಾರಿಯಲ್ಲಿ ಮದ್ದೂರಿಂದ ಹೋಗುತ್ತಿದ್ದ ಪ್ಯಾಸೆಂಜರ್ ಆಟೋಗೆ ಲಾರಿ ಹಿಂದಿನಿಂದ ಡಿಕ್ಕಿಹೊಡೆದು ಘಟನೆ ನಡೆದಿದ್ದು, ಆಟೋದಲ್ಲಿದ್ದ ದುಂಡಳ್ಳಿ ಗ್ರಾಮದ ಅಭಿ(20) ಮಲ್ಲನಕುಪ್ಪೆ ಕೃಷ್ಣ(23) ಹಾಗೂ ತಿಟ್ಟಮಾರನಹಳ್ಳಿ ಗ್ರಾಮದ ಪ್ರಶಾಂತ್(21) ಸಾವಿಗೀಡಾಗಿದ್ದಾರೆ.
ಮೃತ ಯುವಕರ ಶವಗಳನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.