ಮಂಡ್ಯ:ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರ ಗಡಿ ದಾಟಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ಒಂದೇ ದಿನ 1,348 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 30,462 ಕ್ಕೆ ಏರಿಕೆಯಾಗಿದೆ.
ಮಂಡ್ಯದಲ್ಲಿ 1,348 ಕೋವಿಡ್ ಕೇಸ್ ಪತ್ತೆ: ಸೋಂಕಿಗೆ ಐವರು ಬಲಿ
ಮಂಡ್ಯದಲ್ಲಿ ನಿನ್ನೆ 1,348 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ.
ಕೋವಿಡ್ ಅಪ್ಡೇಟ್
ನಿನ್ನೆ 814 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 24,525 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,720 ಇದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 215 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
- ಮಂಡ್ಯ- 468
- ಮದ್ದೂರು- 169
- ಮಳವಳ್ಳಿ- 209
- ಪಾಂಡವಪುರ- 138
- ಶ್ರೀರಂಗಪಟ್ಟಣ- 120
- ಕೆ.ಆರ್.ಪೇಟೆ- 72
- ನಾಗಮಂಗಲ- 150
- ಹೊರ ಜಿಲ್ಲೆಯ- 22 ಪ್ರಕರಣಗಳು ದಾಖಲಾಗಿವೆ.