ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಜಾಗೀರಗುಡದೂರು ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರು ಪಾಲಾಗಿದ್ದಾನೆ.
ಈಜಲು ತೆರಳಿದ್ದ ಯುವಕ ಜಾಗೀರಗುಡದೂರು ಕೆರೆಯಲ್ಲಿ ಮುಳುಗಿ ಸಾವು - ಕುಷ್ಟಗಿ ಸುದ್ದಿ
ಜಾಗೀರಗುಡದೂರು ಕೆರೆಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬ ನೀರು ಪಾಲಾಗಿರುವ ಘಟನೆ ನಡೆದಿದೆ.
ಜಾಗೀರಗುಡದೂರ ಗ್ರಾಮದ ವಿನೋದ್ ಶರಣಪ್ಪ ಬಾದಿಮಿನಾಳ (24) ಮೃತ ವ್ಯಕ್ತಿ. ಡಿ.1ರಂದು ಇಬ್ಬರು ಸ್ನೇಹಿತರೊಂದಿಗೆ ತುಂಬಿದ ಕೆರೆ ನೋಡಲು ಹೋಗಿದ್ದರು. ಈ ವೇಳೆ ಸ್ನೇಹಿತರು ಬಹಿರ್ದೆಸೆಗೆಂದು ತೆರಳಿದ್ದಾರೆ. ಆದರೆ ಅಲ್ಪಸ್ವಲ್ಪ ಈಜು ಕಲಿತಿದ್ದ ವಿನೋದ್ ಕೆರೆಯಲ್ಲಿ ಈಜಲು ಮುಂದಾಗಿದ್ದು, ನೀರುಪಾಲಾಗಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಸ್ನೇಹಿತರಿಗೆ ವಿನೋದ ಕಣ್ಮರೆಯಾಗಿರುವುದು ತಿಳಿದುಬಂದಿದೆ.
ಮೃತ ವಿನೋದ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಶೋಧಕಾರ್ಯ ನಡೆಸಿದ್ದು, ಇಂದು ಪತ್ತೆಯಾಗಿದೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.