ಕುಷ್ಟಗಿ(ಕೊಪ್ಪಳ): ಸಂಧೀವಾತ, ಅಪೌಷ್ಟಿಕತೆಯಿಂದ ಬಳಲಿ ಖಿನ್ನತೆಗೊಳಗಾಗಿದ್ದ ಯುವತಿಯನ್ನು ಇನ್ನರ್ ವ್ಲೀಲ್ ಕ್ಲಬ್ ಸಹಾಯದಿಂದ ಸ್ತ್ರೀ ನಿಕೇತನ ಆರೈಕೆ ಕೇಂದ್ರಕ್ಕೆ ಕಳುಹಿಸಿ ಮಾನವೀಯತೆ ಮೆರೆಯಲಾಗಿದೆ.
ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಯುವತಿ: ಸ್ತ್ರೀ ನಿಕೇತನ ಆರೈಕೆ ಕೇಂದ್ರದಿಂದ ರಕ್ಷಣೆ - ಕೊಪ್ಪಳ ಜಿಲ್ಲೆಯ ಕುಷ್ಟಗಿ
ಅಪೌಷ್ಟಿಕತೆಯಿಂದ ನರಳುತ್ತಿದ್ದ ಯುವತಿಯನ್ನು ಕುಷ್ಟಗಿಯಲ್ಲಿ ಇನ್ನರ್ ವ್ಲೀಲ್ ಕ್ಲಬ್ ಸಹಾಯದಿಂದ ಸ್ತ್ರೀ ನಿಕೇತನ ಆರೈಕೆ ಕೇಂದ್ರಕ್ಕೆ ಕಳುಹಿಸಿ ಮಾನವೀಯತೆ ಮೆರೆಯಲಾಗಿದೆ.
ಕುಷ್ಟಗಿಯ ಪೂಜಾ ಈರಣ್ಣ ಯಾದಗಿರಿ ಅನಾಥೆ. ಈ ಹಿನ್ನೆಲೆ ಚಿಕ್ಕ ಮನೆಯಲ್ಲಿ ಒಬ್ಬಂಟಿ ಜೀವನ ನಡೆಸುತ್ತಿದ್ದಳು. ಬ್ರೆಡ್, ಬನ್ ದ್ರವರೂಪದ ದೈನಂದಿನ ಆಹಾರವಾಗಿದ್ದರಿಂದ ತೀರ ಕೃಶಳಾಗಿದ್ದಳು. ಅತಿಯಾದ ಅಪೌಷ್ಟಿಕತೆ ಹಾಗೂ ಸಂಧೀವಾತದಿಂದ ಶೌಚಕ್ಕೆ ಹೋಗಬೇಕಾದರೆ ಕೋಲು ಬಳಸುತ್ತಿದ್ದಳು. ಆಕೆಗೆ ವಕ್ಕರಿಸಿದ ವಿಚಿತ್ರ ಕಾಯಿಲೆಗೆ ಕೈಕಾಲು ಬೆಂಡಾಗಿದ್ದವು. ಆದರೂ ಆತ್ಮಸ್ಥೈರ್ಯ ಕಳೆದುಕೊಂಡಿರಲ್ಲ.
ಕೆಲ ದಿನಗಳು ತನಗಾದ ಸ್ಥಿತಿಗೆ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮೇಘಾ ದೇಸಾಯಿ ಹಾಗೂ ನಿಕಟಪೂರ್ವ ಅಧ್ಯಕ್ಷೆ ಡಾ.ಪಾರ್ವತಿ ರತನೂರು ಸಂಪರ್ಕಿಸಿದ್ದಳು. ಈ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಮರೇಶ ಸಂಪರ್ಕಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿದ್ದರು. ಈ ಹಿನ್ನೆಲೆ ಅನಾಥೆ ಪೂಜಾಳನ್ನು ಇಲಾಖೆಯ ವಾಹನದಲ್ಲಿ ಬಳ್ಳಾರಿಯ ಸ್ತ್ರೀ ನಿಕೇತನ ಆರೈಕೆ ಕೇಂದ್ರಕ್ಕೆ ಕಳುಹಿಸಲಾಯಿತು.