ಕೊಪ್ಪಳ: ನಾವು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಡಿವೋರ್ಸ್ ಕೊಟ್ಟಿದ್ದೇವೆ. ಡಿವೋರ್ಸ್ ಕೊಟ್ಟವರು, ಯಾವುದೇ ಕಾರಣಕ್ಕೂ ಒಂದಾಗಿಲ್ಲ. ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ನಾವು ಹೋಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ ಪಕ್ಷಕ್ಕೆ ಡಿವೋರ್ಸ್ ಕೊಟ್ಟಿದ್ದೇವೆ. ಬಿಜೆಪಿ ಮನೆಗೆ ಸೊಸೆಯಾಗಿ ಬಂದಿದ್ದೇವೆ. ಇಲ್ಲಿಯೇ ಮಕ್ಕಳಾಗಿರುತ್ತೇವೆ. ಪಕ್ಷ ಬದಲಾವಣೆ ಇಲ್ಲ ಎಂದರು.
ಕೊಪ್ಪಳದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಅಮಿತ್ ಶಾ, ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿಲ್ಲ. ಯಡಿಯೂರಪ್ಪ ಅವರೇ ರಾಜೀನಾಮೆ ಕೊಟ್ಟಿದ್ದಾರೆ ಎಂದ ಅವರು ಇದೇ ವೇಳೆ ಹಾದಿ, ಬೀದಿಯಲ್ಲಿ ಯಾರೂ ಮಾತನಾಡಬಾರದು ಎಂದು ಎಂ.ಪಿ. ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಸೋಮಶೇಖರ್ ರೆಡ್ಡಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಬಿ.ಸಿ.ಪಾಟೀಲ್ ಪೋಟೋಶೂಟ್ನಲ್ಲಿ ಬ್ಯೂಸಿಯಾಗಿದ್ದಾರೆಂಬ ಕಾಂಗ್ರೆಸ್ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಕೃಷಿ ಸಚಿವನಾಗಿ ಕೃಷಿ ಉತ್ತೇಜನಕ್ಕಾಗಿ ಫೋಟೋ ತೆಗೆಸಿಕೊಂಡಿದ್ದೇನೆ. ಅದು ನಾಟಕೀಯವಲ್ಲ, ವಾಸ್ತವ. ನಾನೇನು ಕಿಕ್ ಬ್ಯಾಕ್ ಪಡೆದಿಲ್ಲ. ಕಾಂಗ್ರೆಸ್ಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಓದಿ:ಭಾರತ ಜೊತೆ ಅಮೆರಿಕ ಸಂಬಂಧ ತನ್ನದೇ ಅರ್ಹತೆ ಮೇಲೆ ನಿಂತಿದೆ; ರಷ್ಯಾ ಜತೆಗಿನ ಉದ್ವಿಗ್ನತೆ ಪರಿಣಾಮ ಬೀರಲ್ಲ ಎಂದ ಯುಎಸ್