ಕೊಪ್ಪಳ:ಕೊಪ್ಪಳದಲ್ಲಿರುವ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ದೇಶ, ವಿದೇಶಗಳ ಗಮನ ಸೆಳೆದಿದೆ. ಕ್ಷೇತ್ರದ ಅಭಿವೃದ್ದಿಗೆ ನಮ್ಮ ಸರಕಾರ ಬದ್ದವಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮ ಮಾಲೆ ವಿಸರ್ಜನೆ ಅಂಗವಾಗಿ ಡಿ.4 ಮತ್ತು 5ರಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಎರಡು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ ಎಂದರು.
ಅಂಜನಾದ್ರಿ ಅಭಿವೃದ್ಧಿಗೆ ನಾವು ಬದ್ದ: ಸಚಿವೆ ಶಶಿಕಲಾ ಜೊಲ್ಲೆ - ETv Bharat kannada news
ಹನುಮ ಮಾಲೆ ವಿಸರ್ಜನೆ ಅಂಗವಾಗಿ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ದಿಗೆ ಸರಕಾರ ಬದ್ದವಾಗಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಕಳೆದೆರಡು ವರ್ಷ ಕೋವಿಡ್ ಹೆಚ್ಚಾಗಿದ್ದು ಭಕ್ತರು ಸೇರುವುದನ್ನು ನಿರ್ಬಂಧಿಸಿದ್ದೆವು. ಆದರೂ, ಕಳೆದ ವರ್ಷ 60-70ಸಾವಿರ ಭಕ್ತರು ಬೆಟ್ಟಕ್ಕೆ ಬಂದಿದ್ದರು. ಈ ವರ್ಷ ಎರಡು ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ. ಅವರಿಗೆಲ್ಲ ವಾಹನ ಪಾರ್ಕಿಂಗ್, ಸ್ನಾನ, ಪ್ರಸಾದ, ಕುಡಿಯುವ ನೀರು ಹಾಗೂ ಪೂಜೆ ಸಲ್ಲಿಸಲು ಅನುಕೂಲ ಕಲ್ಪಿಸಲಾಗಿದೆ. ಅಂಜನಾದ್ರಿಗೆ ಬರುವ ಭಕ್ತರಿಗೆ ಯಾವುದೇ ಅನಾನುಕೂಲ ಆಗದ ಹಾಗೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವೆ ತಿಳಿಸಿದರು.
ಇದನ್ನೂ ಓದಿ:ಅಯೋಧ್ಯೆಯಿಂದ ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ.. ಮೋದಿ ಟೆಂಪಲ್ ಟೂರಿಸಂ ರಾಜ್ಯದಲ್ಲೂ ಅಳವಡಿಕೆ: ಸಚಿವೆ ಜೊಲ್ಲೆ