ಕರ್ನಾಟಕ

karnataka

ETV Bharat / state

ರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸಲು ಹೇಳಿದ್ದು ವೈಜನಾಥರ ಎದೆಗಾರಿಕೆ: ಶರಣಬಸಪ್ಪ ಕೋಲ್ಕಾರ

ಕರ್ನಾಟಕ ರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿ ಆಚರಿಸಬೇಕು ಎಂದು ಕರೆ ಕೊಟ್ಟ ಮಾಜಿ ಸಚಿವ, ಹೈ-ಕ ಹೋರಾಟ ಸಮಿತಿಯ ಮುಖ್ಯ ಪ್ರೇರಕ ವೈಜನಾಥ ಪಾಟೀಲ್ ಎದೆಗಾರಿಕೆ ಮೆಚ್ಚುವಂಥದ್ದು ಎಂದು ಹಿರಿಯ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದ್ದಾರೆ.

ರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸಲು ಹೇಳಿದ್ದು ವೈಜನಾಥರ ಎದೆಗಾರಿಕೆ: ಡಾ. ಶರಣಬಸಪ್ಪ ಕೋಲ್ಕಾರ

By

Published : Nov 3, 2019, 6:57 PM IST

ಗಂಗಾವತಿ: ಕರ್ನಾಟಕ ರಾಜ್ಯೋತ್ಸವ ದಿನವನ್ನುಕರಾಳ ದಿನವನ್ನಾಗಿ ಆಚರಿಸಬೇಕು ಎಂದು ಕರೆ ಕೊಟ್ಟ ಮಾಜಿ ಸಚಿವ ಹೈ-ಕ(ಕಲ್ಯಾಣ ಕರ್ನಾಟಕ) ಹೋರಾಟ ಸಮಿತಿಯ ಮುಖ್ಯಪ್ರೇರಕ ವೈಜನಾಥ ಪಾಟೀಲ್ ಎದೆಗಾರಿಕೆ ಮೆಚ್ಚುವಂಥದ್ದು ಎಂದು ಹಿರಿಯ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದ್ದಾರೆ.

ರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸಲು ಹೇಳಿದ್ದು ವೈಜನಾಥರ ಎದೆಗಾರಿಕೆ: ಡಾ. ಶರಣಬಸಪ್ಪ ಕೋಲ್ಕಾರ

ಮಾಜಿ ಸಚಿವ ದಿವಂಗತ ವೈಜನಾಥ ಪಾಟೀಲ್ ಅವರ ಗೌರವಾರ್ಥ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಕೋಲ್ಕಾರ, ಹೈ-ಕಕ್ಕೆ ಪ್ರತ್ಯೇಕ ರಾಜ್ಯದ ಮಾನ್ಯತೆ ಬೇಕೆಂದು ಹೋರಾಟಕ್ಕೆ ಕರೆ ನೀಡಿದ್ದರು.
ಅವರ ಉದ್ದೇಶ ನಿಜವಾಗಿಯೂ ಅಖಂಡ ಕರ್ನಾಟಕವನ್ನು ಒಡೆಯುವುದಾಗಿರಲಿಲ್ಲ. ದಶಕಗಳಿಂದಲೂ ಅಭಿವೃದ್ಧಿ ಕಾಣದ ಹೈ-ಕ ಭಾಗಕ್ಕೆ ಪ್ರತ್ಯೇಕ ರಾಜ್ಯದ ಕೂಗು ಎದ್ದರೆ ಕನಿಷ್ಠ ಪಕ್ಷ ವಿಶೇಷ ಸ್ಥಾನಮಾನವಾದರೂ ಸಿಗುತ್ತದೆ ಎಂಬ ಉದ್ದೇಶವಿತ್ತು ಅದು ಈಡೇರಿದೆ ಎಂದರು.

ABOUT THE AUTHOR

...view details