ಕರ್ನಾಟಕ

karnataka

ETV Bharat / state

ಕೊಪ್ಪಳ: ಮುಗಿಯದ ಮರ ತೆರವು ಕಾರ್ಯ; ಸಾರ್ವಜನಿಕರ ಪರದಾಟ

ಸುಮಾರು 50 ವರ್ಷದಷ್ಟು ಹಳೆಯದಾದ ಬೃಹದಾಕಾರದ ಮರ ಧರೆಗುರುಳಿದೆ. ಇದರ ತೆರವು ಕಾರ್ಯಚರಣೆ 12 ಗಂಟೆ ಕಳೆದರೂ ಮುಗಿಯುತ್ತಿಲ್ಲ. ಹೀಗಾಗಿ ಗಂಗಾವತಿಯಲ್ಲಿ ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ.

Unfinished tree clearing work, vehicular traffic
ಮುಗಿಯದ ಧರೆಗುರುಳಿದ ಮರದ ತೆರವು ಕಾರ್ಯ, ವಾಹನ ಸವಾರರ ಪರದಾಟ

By

Published : Nov 23, 2022, 12:36 PM IST

Updated : Nov 23, 2022, 2:48 PM IST

ಗಂಗಾವತಿ (ಕೊಪ್ಪಳ): ಇಲ್ಲಿನ ಪಂಪಾನಗರ ವೃತ್ತದ ಸಮೀಪವಿರುವ ಸುಮಾರು 50 ವರ್ಷದಷ್ಟು ಹಳೆಯ ಬೃಹದಾಕಾರದ ಮರ ಧರೆಗುರುಳಿದೆ. ಇದರ ತೆರವು ಕಾರ್ಯಾಚರಣೆ ಹನ್ನೆರಡು ಗಂಟೆ ಕಳೆದರೂ ಮುಗಿದಿಲ್ಲ. ಹೀಗಾಗಿ, ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.

ಕೊಪ್ಪಳ: ಮುಗಿಯದ ಮರ ತೆರವು ಕಾರ್ಯ; ಸಾರ್ವಜನಿಕರ ಪರದಾಟ

ಆನೆಕಿವಿ ಮರ ಎಂದು ಕರೆಯಲಾಗುವ ಈ ಮರವನ್ನು 1980ರ ಆಸುಪಾಸಿನಲ್ಲಿ ನೆಡಲಾಗಿತ್ತು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮರ ಧರೆಗುರುಳಿದ್ದರಿಂದ ಹತ್ತಾರು ವಾಹನಗಳು ಜಖಂಗೊಂಡಿವೆ. ಟಿ. ಭಾಷಾಸಾಬ ಎಂಬ ಗುತ್ತಿಗೆದಾರರು ತೀವ್ರ ಗಾಯಗೊಂಡಿದ್ದರು. ಮರದ ಸುತ್ತಲೂ ಇದ್ದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ :ಮಂಗಳೂರಿನಲ್ಲಿ ನಿರಂತರ 18 ಗಂಟೆಗಳ ಶ್ರಮ: ಎರಡು ಬೃಹತ್ ಅಶ್ವತ್ಥ ವೃಕ್ಷಗಳ ಸ್ಥಳಾಂತರ

Last Updated : Nov 23, 2022, 2:48 PM IST

ABOUT THE AUTHOR

...view details