ಕೊಪ್ಪಳ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ರಂಗೇರುತ್ತಿದೆ. ಮೊದಲ ಹಂತದಲ್ಲಿ ನಡೆಯಲಿರುವ 73 ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 3,341 ಜನ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಮೊದಲ ಹಂತದಲ್ಲಿ ಕೊಪ್ಪಳ, ಯಲಬುರ್ಗಾ, ಕುಕನೂರು ತಾಲೂಕು ಸೇರಿ ಒಟ್ಟು 73 ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದೆ.
ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತ್, ಯಲಬುರ್ಗಾ ತಾಲೂಕಿನ 20 ಹಾಗೂ ಕುಕನೂರು ತಾಲೂಕಿನ 15 ಗ್ರಾಮ ಪಂಚಾಯತ್ ಸೇರಿ ಮೊದಲ ಹಂತದ 73 ಗ್ರಾಮ ಪಂಚಾಯತ್‍ಗಳ 1321 ಒಟ್ಟು ಸ್ಥಾನಗಳಿಗೆ ಸದಸ್ಯರ ಆಯ್ಕೆ ಆಗಬೇಕಿದ್ದು, ಈ ಪೈಕಿ 109 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ.
ಉಳಿದಂತೆ 1212 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 3341 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಡಿಸೆಂಬರ್ 22 ರಂದು ಮತದಾರರು ಈ ಎಲ್ಲ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.
ಓದಿ: ಬರ್ತ್‌ಡೇ ಮುಗಿಸಿ ಬುಲೆಟ್‌ನಲ್ಲಿ ಬರುತ್ತಿದ್ದ ವೇಳೆ ದುರ್ಘಟನೆ: ಅಪಘಾತದ ಸಿಸಿಟಿವಿ ದೃಶ್ಯ