ಕೊಪ್ಪಳ: ತಾಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಕಾಡಾ ಕಚೇರಿ ಸಭಾಂಗಣದಲ್ಲಿ ನಡೆದ 114ನೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಿನ ಲಭ್ಯತೆ ಆಧರಿಸಿ ವಿವಿಧ ನಾಲೆಗಳ ಮೂಲಕ ಎರಡನೇ ಬೆಳೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ಎರಡನೇ ಬೆಳೆಗೆ ತುಂಗಾಭದ್ರಾ ನೀರು ಹರಿಸಲು ತೀರ್ಮಾನ ಸಭೆಯ ಬಳಿಕ ಸಚಿವರಾದ ಆನಂದ್ ಸಿಂಗ್ ಹಾಗೂ ಬಿ.ಸಿ.ಪಾಟೀಲ್ ನೀರು ಬಿಡುವ ಕುರಿತಂತೆ ಮಾಹಿತಿ ನೀಡಿದರು. ಲಭ್ಯತೆ ಇರುವ ನೀರಿನಲ್ಲಿ ಎರಡನೇ ಬೆಳೆಗೆ ಸುಮಾರು 10 ಟಿಸಿಎಂ ನೀರು ಕೊರತೆಯಾಗಲಿದೆ. ಆದರೂ ಎರಡನೇ ಬೆಳೆಗಾಗಿ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ಡಿಸೆಂಬರ್ 01-20ರವರೆಗೆ 2400 ಕ್ಯೂಸೆಕ್ನಂತೆ, ಡಿಸೆಂಬರ್ 21ರಿಂದ ಮಾರ್ಚ್ 31ರವರೆಗೆ 3300 ಕ್ಯೂಸೆಕ್, ಏಪ್ರಿಲ್ 01ರಿಂದ 10ರವರೆಗೆ 2000 ಕ್ಯೂಸೆಕ್ನಂತೆ ನೀರು ಹರಿಸಲು ನಿರ್ಧರಿಸಲಾಗಿದೆ.
ಎರಡನೇ ಬೆಳೆಗೆ ತುಂಗಾಭದ್ರಾ ನೀರು ಹರಿಸಲು ತೀರ್ಮಾನ ಇನ್ನು ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ ಡಿಸೆಂಬರ್ 11ರಿಂದ 20ರವರೆಗೆ 750 ಕ್ಯೂಸೆಕ್ನಂತೆ, ಡಿಸೆಂಬರ್ 21ರಿಂದ 31ರವರೆಗೆ ನೀರು ನಿಲ್ಲಿಸಲಾಗುತ್ತದೆ. ಜನವರಿ 1ರಿಂದ 15ರವರೆಗೆ 770 ಕ್ಯೂಸೆಕ್ ನೀರು ಹರಿಸಲಾಗುತ್ತದೆ. ಇನ್ನು ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ 25ರವರೆಗೆ 250 ಕ್ಯೂಸೆಕ್, ಡಿಸೆಂಬರ್ 26ರಿಂದ ಮಾರ್ಚ್ 31ರವರೆಗೆ 660 ಕ್ಯೂಸೆಕ್, ಏಪ್ರಿಲ್ 1ರಿಂದ 10ರವರೆಗೆ 200 ಕ್ಯೂಸೆಕ್ ನೀರನ್ನು ಕುಡಿಯುವ ಸಲುವಾಗಿ ಬಿಡಲಾಗುತ್ತದೆ.
ಎರಡನೇ ಬೆಳೆಗೆ ತುಂಗಾಭದ್ರಾ ನೀರು ಹರಿಸಲು ತೀರ್ಮಾನ ರಾಯಬಸವಣ್ಣ ಕಾಲುವೆಗೆ ಜನವರಿ 16ರಿಂದ ಮೇ 31ರವರೆಗೆ 180 ಕ್ಯೂಸೆಕ್, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿಸೆಂಬರ್ 01ರಿಂದ 25 ಕ್ಯೂಸೆಕ್ನಂತೆ ಅಥವಾ ಕಾಲುವೆ ಮಟ್ಟ 1585 ಅಡಿ ತಲುಪುವವರೆಗೂ ನೀರು ಹರಿಸಲು ತೀರ್ಮಾನಿಸಲಾಗಿದೆ.
ಎರಡನೇ ಬೆಳೆಗೆ ತುಂಗಾಭದ್ರಾ ನೀರು ಹರಿಸಲು ತೀರ್ಮಾನ