ಕೊಪ್ಪಳ:ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರೆಯ ಒಡಲು ಬರಿದಾಗಲಾರಂಭಿಸಿದೆ. ಜಲಾಶಯದಲ್ಲಿ ಕೇವಲ ಸುಮಾರು 3 ಟಿಎಂಸಿಯಷ್ಟು ಮಾತ್ರ ನೀರು ಉಳಿದುಕೊಂಡಿದ್ದು ಜಲಾಶಯದ ಅಂಗಳದಲ್ಲಿ ಮಕ್ಕಳು ಕ್ರಕಿಟ್ ಆಡಲು ಮೈದಾನವಾದಂತಾಗಿದೆ.
ಬರಿದಾಗುತ್ತಿರುವ ತುಂಗಭದ್ರೆಯ ಒಡಲು: ಆತಂಕದಲ್ಲಿ ಜನತೆ
ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರೆಯ ಒಡಲು ಬರಿದಾಗಲಾರಂಭಿಸಿದೆ. ಜಲಾಶಯದಲ್ಲಿ ಕೇವಲ ಸುಮಾರು 3 ಟಿಎಂಸಿಯಷ್ಟು ಮಾತ್ರ ನೀರು ಉಳಿದುಕೊಂಡಿದ್ದು ಜಲಾಶಯದ ಅಂಗಳವೀಗ ಕ್ರಿಕೆಟ್ ಮೈದಾನವಾಗುತ್ತಿದೆ.
ಮೇ 31 ಕ್ಕೆ ಈ ಜಲ ವರ್ಷ ಮುಗಿಯುತ್ತದೆ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯದಿಂದ ಈಗಾಗಲೇ ಕೆಲವೆಡೆ ನೀರನ್ನು ಬೇರೆ ಬೇರೆ ಕಡೆ ಸಂಗ್ರಹಿಸಿಕೊಳ್ಳಲಾಗಿದೆ. ಆದರೆ ನೀರಿನ ಸಂಗ್ರಹಣೆ ಎಲ್ಲಿ ಇಲ್ಲವೋ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಉಂಟಾಗಿದೆ. ಮೇ ಅಂತ್ಯದೊಳಗಾಗಿ ದೊಡ್ಡ ಮಳೆಯಾಗಿ ಜಲಾಶಯಕ್ಕೆ ನೀರು ಹರಿದು ಬರದೇ ಇದ್ದರೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುತ್ತಾರೆ ತುಂಗಭದ್ರಾ ಬಚಾವೋ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಆರ್. ವೆಂಕಟೇಶ್ ಅವರು.
ಒಟ್ಟಾರೆ ಈಗ ಮಳೆರಾಯನ ಆಗಮನಕ್ಕೆ ಜನರು ಮುಗಿಲಿಗೆ ಮುಖಮಾಡಿ ಎದುರು ನೋಡುವಂತಾಗಿದೆ. ಮೇ ಅಂತ್ಯದೊಳಗೆ ಚೆನ್ನಾಗಿ ಮಳೆಯಾದರೆ ಮಾತ್ರ ಮುಂದಾಗಬಹುದಾದ ಕುಡಿಯುವ ನೀರಿನ ತೊಂದರೆಯಿಂದ ಪಾರಾಗಬಹುದು. ಇಲ್ಲದೆ ಹೋದರೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಲಿದೆ.