ಕರ್ನಾಟಕ

karnataka

ETV Bharat / state

ಬಿಜೆಪಿ ರ‍್ಯಾಲಿಯಿಂದ ಟ್ರಾಫಿಕ್ ಜಾಮ್... ಆಂಬ್ಯುಲನ್ಸ್​ಗೂ ಸಿಗದ ದಾರಿ, ಪರದಾಡಿದ ರೋಗಿ - ಟ್ರಾಫಿಕ್ ಜಾಮ್

ಕೊಪ್ಪಳ ಲೋಕಸಭಾ ಅಭ್ಯರ್ಥಿ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿಯ ಬೃಹತ್ ಮೆರವಣಿಗೆಯಿಂದ ಟ್ರಾಫಿಕ್ ಜಾಮ್. ವಾಹನಗಳ ಮಧ್ಯೆ ಆಂಬ್ಯುಲನ್ಸ್ ಸಿಕ್ಕಿಕೊಂಡ ಪರಿಣಾಮ ಪರದಾಡಿದ ರೋಗಿ.

ವಾಹನಗಳ ಮಧ್ಯ ಆಂಬ್ಯುಲೆನ್ಸ್ ಸಿಲುಕಿ ರೋಗಿ ಪರದಾಟ

By

Published : Apr 4, 2019, 3:30 AM IST

ಕೊಪ್ಪಳ:ನಗರದಲ್ಲಿ ನಡೆದ ಬಿಜೆಪಿರ‍್ಯಾಲಿಯಿಂದ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳ ಮಧ್ಯೆ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡು ರೋಗಿಯೊಬ್ಬರು ಪರದಾಡಿದ ಘಟನೆ ನಡೆಯಿತು.

ನಗರದ ವಾರಕಾರ್ ಓಣಿ ರಸ್ತೆಯಲ್ಲಿ ಈ ಘಟನೆ ನಡೆಯಿತು. ಕೊಪ್ಪಳ ಲೋಕಸಭಾ ಅಭ್ಯರ್ಥಿ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿದ ಬಳಿಕ ನಗರದಲ್ಲಿ ಬುಧವಾರ ಬಿಜೆಪಿ ಬೃಹತ್ ಮೆರವಣಿಗೆ ಹಮ್ಮಿಕೊಂಡಿತ್ತು. ಮೆರವಣಿಗೆ ಹಿನ್ನೆಲೆಯಲ್ಲಿ ಜವಾಹರ ರಸ್ತೆ ಸಂಪೂರ್ಣವಾಗಿ ಜಾಮ್ ಆಗಿತ್ತು.

ವಾಹನಗಳ ಮಧ್ಯ ಆಂಬ್ಯುಲೆನ್ಸ್ ಸಿಲುಕಿ ರೋಗಿ ಪರದಾಟ

ಇದರಿಂದಾಗಿ ಆಂಬ್ಯುಲೆನ್ಸ್ ವಾರಕಾರ ಓಣಿಯ ರಸ್ತೆ ಮೂಲಕ ತೆರಳಲು ಬಂದಿತ್ತು. ಆ ರಸ್ತೆಯಲ್ಲಿಯೂ ಸಹ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದಾಗಿ ಆಂಬ್ಯುಲೆನ್ಸ್ ಇತರೆ ವಾಹನಗಳ ಮಧ್ಯೆ ಅರ್ಧ ಗಂಟೆಗೂ ಹೆಚ್ಚು ಕಾಲು ಸಿಲುಕಿಕೊಂಡಿತ್ತು.ಪರಿಣಾಮ ಅದರಲ್ಲಿದ್ದ ರೋಗಿ ಪರದಾಡುವಂತಾಯಿತು.

ABOUT THE AUTHOR

...view details