ಕರ್ನಾಟಕ

karnataka

ETV Bharat / state

ಕ್ಯಾದಿಗುಪ್ಪ ಡಾಬಾದಲ್ಲಿ ಮೂರೂವರೆ ಕೆಜಿ ಅಫೀಮು ವಶ : ಓರ್ವನ ಬಂಧನ - Three kg of opium sezed

ಬಂಧಿತನಿಂದ 3.5 ಕೆಜಿ ಅಫೀಮು ಪೌಡರ್ ಜಪ್ತಿ ಮಾಡಲಾಗಿದೆ. ಎನ್​ಡಿಪಿಎಸ್ ಕಲಂ 18 (ಸಿ) 25, 27, 8 (ಸಿ) ಪ್ರಕರಣ ದಾಖಲಿಸಲಾಗಿದೆ..

kustagi
ಕ್ಯಾದಿಗುಪ್ಪ ಡಾಬಾದಲ್ಲಿ ಮೂರೂವರೆ ಕೆ.ಜಿ. ಅಫೀಮು ವಶ: ಓರ್ವನ ಬಂಧನ

By

Published : Feb 9, 2021, 7:29 PM IST

ಕುಷ್ಟಗಿ :ಕುಷ್ಟಗಿ-ಇಲಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕ್ಯಾದಿಗುಪ್ಪ ಕ್ರಾಸ್ ಬಳಿ ಇರುವ ಮಹಾದೇವ ಡಾಬಾದಲ್ಲಿ ಸೋಮವಾರ ರಾತ್ರಿ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಆರೋಪಿ ಸಮೇತ ಮಾದಕ ಅಫೀಮು ಪೌಡರ್ ವಶಪಡಿಸಿಕೊಂಡಿದ್ದಾರೆ.

ಅಸೂರಾಮ್ ಎಂಬಾತ ಬಂಧಿತ ಆರೋಪಿ. ಅಬಕಾರಿ ಇಲಾಖೆಯ ಜಂಟಿ ಆಯುಕ್ತರ ನಿರ್ದೇಶನದಂತೆ ಕೊಪ್ಪಳ ಜಿಲ್ಲೆ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.

ಬಂಧಿತನಿಂದ 3.5 ಕೆಜಿ ಅಫೀಮು ಪೌಡರ್ ಜಪ್ತಿ ಮಾಡಲಾಗಿದೆ. ಎನ್​ಡಿಪಿಎಸ್ ಕಲಂ 18 (ಸಿ) 25, 27, 8 (ಸಿ) ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಅಬಕಾರಿ ಉಪ ಆಯುಕ್ತ ಸೆಲಿನಾ, ಉಪ ಅಧೀಕ್ಷ ಮಹೇಶ, ಅಬಕಾರಿ ನಿರೀಕ್ಷಕ ಸ್ವತಂತ್ರ ಕುಮಾರ, ವೀರೇಶ್, ಬಬ್ರುವಾಹನ, ಹುಸೇನ್ ಭಾಷಾ ಇದ್ದರು.

ABOUT THE AUTHOR

...view details