ಕರ್ನಾಟಕ

karnataka

ETV Bharat / state

ಸ್ವಯಂಪ್ರೇರಿತ ಬಂದ್​ಗೆ ನೀರಸ ಪ್ರತಿಕ್ರಿಯೆ

ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಿನ್ನೆ ವಿವಿಧ ವರ್ತಕರ ಸಂಘದ ಮುಖಂಡರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಜುಲೈ 8 ರಿಂದ 25 ರವರೆಗೆ ಮಧ್ಯಾಹ್ನ 2 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡುವುದಾಗಿ ಹೇಳಿದ್ದರು..

self announced lockdown
ಸ್ವಯಂಪ್ರೇರಿತ ಬಂದ್​ಗೆ ನೀರಸ ಪ್ರತಕ್ರಿಯೆ

By

Published : Jul 8, 2020, 7:26 PM IST

ಕೊಪ್ಪಳ :ನಗರದಲ್ಲಿ ಇಂದಿನಿಂದ ಜುಲೈ 25ರವರೆಗೆ ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ನಿರ್ಧಾರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಧ್ಯಾಹ್ನ 3 ಗಂಟೆಯಾದ್ರೂ ನಗರದ ಬಹುಪಾಲು ಅಂಗಡಿ ಮಳಿಗೆಗಳು ಯಥಾ ರೀತಿ ಓಪನ್ ಆಗಿದ್ದವು. ಕೆಲವರು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ರೆ ಇನ್ನು ಕೆಲವರು ಅಂಗಡಿಗಳನ್ನು ಎಂದಿನಂತೆ ಓಪನ್ ಮಾಡಿಕೊಂಡಿದ್ದರು.‌

ಸ್ವಯಂಪ್ರೇರಿತ ಬಂದ್​ಗೆ ನೀರಸ ಪ್ರತಕ್ರಿಯೆ

ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಿನ್ನೆ ವಿವಿಧ ವರ್ತಕರ ಸಂಘದ ಮುಖಂಡರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಜುಲೈ 8 ರಿಂದ 25 ರವರೆಗೆ ಮಧ್ಯಾಹ್ನ 2 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡುವುದಾಗಿ ಹೇಳಿದ್ದರು. ಆದರೆ, ಆ ನಿರ್ಧಾರ ಕೇವಲ ಘೋಷಣೆ ಮಾತ್ರವಾಯ್ತು ಎನ್ನುವಂತೆ ವಾತಾವರಣ ನಿರ್ಮಾಣವಾಗಿತ್ತು.

ಜನರ ಹಾಗೂ ವಾಹನಗಳ ಓಡಾಟ ಎಂದಿನಂತೆ ಇರುವುದು ಕಂಡು ಬಂದಿತು. ಕುಷ್ಟಗಿ ಪಟ್ಟಣದಲ್ಲೂ ಸಹ ಮಧ್ಯಾಹ್ನ 3 ಗಂಟೆಯ ವೇಳೆಗೆ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಬೆರಳೆಣಿಕೆಯಷ್ಟು ಅಂಗಡಿಗಳು ಮಾತ್ರ ಓಪನ್ ಆಗಿರುವುದು ಕಂಡು ಬಂತು.

ABOUT THE AUTHOR

...view details