ಗಂಗಾವತಿ:ನಗರದ ಗಾಂಧಿ ವೃತ್ತ ಹಾಗೂ ಮಹಾವೀರ ವೃತ್ತದ ಮಧ್ಯದಲ್ಲಿರುವ ವ್ಯಾಮ್ (ವಿಎಎಂ) ಫುಡ್ ಬಜಾರ್‌ನಲ್ಲಿ ಬೆಳಗಿನ ಜಾವ ಕಳ್ಳತನವಾಗಿದೆ. ಕಳ್ಳರು ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಶನಿವಾರ ಇಡೀ ದಿನ ನಡೆದ ವಹಿವಾಟು ಹಣವನ್ನು ಕ್ಯಾಷ್ ಕೌಂಟರ್‌ನಲ್ಲಿಟ್ಟ ಮಾಲಿಕ ಭದ್ರವಾಗಿ ಲಾಕ್ ಮಾಡಿಕೊಂಡು ಮನೆಗೆ ಹೋಗಿದ್ದರು. ಶಾಪಿಂಗ್ ಮಾಲ್‌ನಲ್ಲಿ ಕೋಟ್ಯಂತರ ಮೌಲ್ಯದ ಸಾಮಗ್ರಿಗಳಿದ್ದರೂ ಯಾವುದನ್ನೂ ಮುಟ್ಟದೆ ಹಣವನ್ನು ದೋಚಿದ್ದಾರೆ.