ಕರ್ನಾಟಕ

karnataka

ETV Bharat / state

ಗ್ರಾ.ಪಂ. ಸಿಬ್ಬಂದಿ ಆತ್ಮಹತ್ಯೆ... ಪಿಡಿಒ, ಅಧ್ಯಕ್ಷೆಯ ಮೈದುನನ ವಿರುದ್ಧ ಕಿರುಕುಳ ಆರೋಪ

ಗ್ರಾಮ ಪಂಚಾಯತ್​ನ ಸಿಬ್ಬಂದಿವೋರ್ವ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಅಲ್ಲಿನ ಪಿಡಿಒ ಹಾಗೂ ಅಧ್ಯಕ್ಷೆಯ ಮೈದುನನ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಮೃತನ ಸಂಬಂಧಿಕರು ಶವವನ್ನು ಗ್ರಾಮ ಪಂಚಾಯತ್ ಮುಂದೆ ಇಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

The Gram Panchayat staff death case.....Protest in koppala!
ಗ್ರಾ.ಪಂ ಸಿಬ್ಬಂದಿ ಆತ್ಮಹತ್ಯೆ....ಮಾನಸಿಕ ಕಿರುಕುಳವೆಂದು ಆರೋಪಿಸಿ ಶವವಿಟ್ಟು ಪ್ರತಿಭಟನೆ!

By

Published : Jan 26, 2020, 5:11 PM IST

ಕೊಪ್ಪಳ: ಕುಷ್ಟಗಿ ತಾಲೂಕಿನ ಅಂಟರಠಾಣಾದಲ್ಲಿ ಗ್ರಾಮ ಪಂಚಾಯತ್​ನ ಸಿಬ್ಬಂದಿವೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಆತ್ಮಹತ್ಯೆಗೆ ಅಲ್ಲಿನ ಪಿಡಿಒ ಹಾಗೂ ಅಧ್ಯಕ್ಷೆಯ ಮೈದುನನ ಕಿರುಕುಳ ಕಾರಣ ಎಂಬ ಆರೋಪ ಕೇಳಿಬಂದಿದೆ. ಮೃತನ ಸಂಬಂಧಿಕರು ಶವವನ್ನು ಗ್ರಾಮ ಪಂಚಾಯತ್ ಮುಂದೆ ಇರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ ಸಿಬ್ಬಂದಿ ಆತ್ಮಹತ್ಯೆ... ಪಿಡಿಒ, ಅಧ್ಯಕ್ಷೆಯ ಮೈದುನನ ವಿರುದ್ಧ ಕಿರುಕುಳ ಆರೋಪ

ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ‌ ಮಾಡುತ್ತಿದ್ದ ರಾಜಶೇಖರ್ ತಮ್ಮಣ್ಣವರ ಜ. 20 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಜಶೇಖರ ಇಂದು ಮೃತಪಟ್ಟಿದ್ದಾರೆ. ರಾಜಶೇಖರನ ಸಾವಿಗೆ ಪಿಡಿಓ ಅಮೀನಸಾಬ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಿ ಅವರ ಮೈದುನ ನೀಡಿರುವ ಕಿರುಕುಳವೇ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ಇಂದು ರಾಜಶೇಖರ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆತನ ಸಂಬಂಧಿಕರು ಶವವನ್ನು ಗ್ರಾಮ ಪಂಚಾಯತ್ ಮುಂದೆ‌ ಇರಿಸಿ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಘಟನೆ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details