ಕೊಪ್ಪಳ: ವೀರಶೈವ ಲಿಂಗಾಯತದಲ್ಲಿ ಅನೇಕ ಸಮುದಾಯಗಳು ಬರುತ್ತವೆ. ಕೇವಲ ಪಂಚಮಸಾಲಿ ಸಮುದಾಯವಷ್ಟೇ ಅಲ್ಲದೆ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ವೀರಶೈವ ಲಿಂಗಾಯತದಲ್ಲಿ ಕುಂಬಾರರು, ಹಡಪದರು ಸೇರಿ ಇನ್ನೂ ಅನೇಕ ಸಮುದಾಯಗಳು ಇವೆ. ಆ ಸಣ್ಣ ಸಮುದಾಯಗಳು ಹೋರಾಟ ಮಾಡಿ ಶಕ್ತಿ ಪ್ರದರ್ಶನ ಮಾಡುವಷ್ಟು ಬಲ ಹೊಂದಿಲ್ಲ. ಈ ಸಮುದಾಯವರು ಶಾಸಕರು ಅಥವಾ ಸಂಸದರಾಗಿಲ್ಲ. ಹೀಗಾಗಿ ಅಂತಹ ಸಮುದಾಯಕ್ಕೂ ಸೌಲಭ್ಯ ಸಿಗಬೇಕು. ಹೀಗಾಗಿ ಕೇವಲ ಪಂಚಮಸಾಲಿ ಸಮಾಜಕ್ಕಷ್ಟೇ ಅಲ್ಲದೆ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಷ್ಟು ದೊಡ್ಡ ಲೀಡರ್ ನಾನಲ್ಲ, ಅವರು ಬಹಳ ದೊಡ್ಡವರು, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರು. ಅವರ ನಾಯಕತ್ವದಲ್ಲಿಯೇ ಹೋರಾಟ ಮಾಡಲಿ, ಸರ್ಕಾರದ ಮಟ್ಟದಲ್ಲಿ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ರಾಜ್ಯದಲ್ಲಿ ಈಗ ಕೇವಲ ಪಂಚಮಸಾಲಿ ಸಮುದಾಯ ಮಾತ್ರ ಮೀಸಲಾತಿಗೆ ಹೋರಾಟ ಮಾಡುತ್ತಿಲ್ಲ. ಕುರುಬರು, ನಾಯಕರು ಹಾಗೂ ಇತರೆ ಸಮುದಾಯಗಳು ಮೀಸಲಾತಿಗೆ ಹೋರಾಟ ಆರಂಭಿಸಿದ್ದಾರೆ. ಇವರಲ್ಲಿ ಬೇರೆ-ಬೇರೆ ಬೇಡಿಕೆಗಳಿವೆ. ತಮ್ಮ-ತಮ್ಮ ಬೇಡಿಕೆಗಳನ್ನು ಸಿಎಂ ಅವರಿಗೆ ತಿಳಿಸಲಿ. ಈ ಕುರಿತಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಪರಿಶೀಲಿಸಿ ವರದಿ ನೀಡುತ್ತದೆ. ಸಂಪುಟದಲ್ಲಿ ಆಯಾ ಸಮುದಾಯದ ಸಚಿವರಿದ್ದು, ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಹೊಸ ಗಣಿ ನೀತಿ: