ಕರ್ನಾಟಕ

karnataka

ETV Bharat / state

ಚಿರತೆ ಹಾವಳಿಗೆ ಜನ ತಲ್ಲಣ : ಸಮುದಾಯ ಜಾಗೃತಿಗೆ ಮುಂದಾದ ತಾಪಂ - ಗಂಗಾವತಿ ಲೇಟೆಸ್ಟ್ ನ್ಯೂಸ್

ಗಂಗಾವತಿ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆನೆಗೊಂದಿ, ಮಲ್ಲಾಪುರ, ರಾಂಪುರ, ವಿರುಪಾಪುರ ಗಡ್ಡೆ, ಅಂಜನಾದ್ರಿ ಸೇರಿದಂತೆ ನಾನಾ ಭಾಗದಲ್ಲಿ ಸಮುದಾಯ ಜಾಗೃತಿ ಮೂಡಿಸುವ ಕಾರ್ಯಕ್ಕೆ ತಾಲೂಕು ಪಂಚಾಯಿತಿ ಚಾಲನೆ ನೀಡಿದೆ.

ಸಮುದಾಯ ಜಾಗೃತಿಗೆ ಮುಂದಾದ ತಾಪಂ
Taluk Panchayat made new plan for leopard awareness program in Gangavathi

By

Published : Jan 6, 2021, 2:44 PM IST

ಗಂಗಾವತಿ: ಕಳೆದೆರಡು ತಿಂಗಳಿಂದ ನಿರಂತರವಾಗಿ ಚಿರತೆ ಹಾವಳಿಯಿಂದ ಕಂಗೆಟ್ಟು ಹೋಗಿರುವ ಆನೆಗೊಂದಿ, ಮಲ್ಲಾಪುರ, ರಾಂಪುರ, ವಿರುಪಾಪುರ ಗಡ್ಡೆ, ಅಂಜನಾದ್ರಿ ಸೇರಿದಂತೆ ನಾನಾ ಭಾಗದಲ್ಲಿ ಸಮುದಾಯ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ತಾಲೂಕು ಪಂಚಾಯಿತಿ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಎಲ್ಲಿ ಚಿರತೆ ಹಾಗೂ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಿದೆಯೋ ಅಲ್ಲಿ ಸೂಚನಾ ಫಲಕ ಹಾಕಿ ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ.

ಈಗಾಗಲೇ ತಾಲೂಕು ಪಂಚಾಯಿತಿ ಹಾಗೂ ಆಯಾ ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಚಿರತೆ ಹಾವಳಿ ಹೆಚ್ಚಿರುವ ಪ್ರದೇಶದಲ್ಲಿ ಈ ಸೂಚನಾ ಫಲಕ ಅಳವಡಿಸಿ ಜನರಲ್ಲಿ ಜಾಗೃತಿಗೆ ಯತ್ನಿಸಲಾಗುತ್ತಿದೆ.

ABOUT THE AUTHOR

...view details