ಕೊಪ್ಪಳ/ಕುಷ್ಟಗಿ: ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆ ಭಾನುವಾರದ ಲಾಕ್ಡೌನ್ಗೆ ಕುಷ್ಟಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಡೇ ಲಾಕ್ಡೌನ್ಗೆ ಸಹಕರಿಸಿದ ಜನತೆ: ಕುಷ್ಟಗಿ ಸ್ತಬ್ಧ - ಕೊಪ್ಪಳದಲ್ಲಿ ಕೊರೊನಾ ಪ್ರಕರಣ
ಭಾನುವಾರದ ಲಾಕ್ಡೌನ್ಗೆ ಕುಷ್ಟಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನಗಳ ಸಂಚಾರ ವಿರಳವಾಗಿದೆ.
ಸಂಡೇ ಲಾಕ್ಡೌನ್ಗೆ ಸಹಕರಿಸಿದ ಜನತೆ
ಸರ್ಕಾರ ಸಂಡೇ ಲಾಕ್ಡೌನ್ ಮುಂಚಿತವಾಗಿ ತಿಳಿಸಿದ್ದರಿಂದ ಜನ ಅಗತ್ಯ ವಸ್ತುಗಳನ್ನು ಶನಿವಾರ ಖರೀದಿಸಿದ್ದು, ಇಂದು ಮನೆಯಲ್ಲಿ ಉಳಿದಿದ್ದಾರೆ. ಈ ಹಿನ್ನೆಲೆ ಪಟ್ಟಣ ಸ್ತಬ್ಧವಾಗಿದ್ದು, ಅಂಗಡಿ ಮುಂಗಟ್ಟು ಸ್ಥಳೀಯ ಎಪಿಎಂಸಿ ಮಾರುಕಟ್ಟೆ ತೆರೆಯದೇ ಲಾಕ್ಡೌನ್ಗೆ ಸಹಕರಿಸಿದರು.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಣ್ಗಾವಲಿಟ್ಟಿದ್ದಾರೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹ ವಾಹನ ಸಂಚಾರ ವಿರಳವಾಗಿದೆ.