ಗಂಗಾವತಿ :ವಿಶ್ವ ವಿದ್ಯಾಲಯದ ಪರೀಕ್ಷಾ ಶುಲ್ಕ ಪಾವತಿಸಲು ನಗರದ ವಿವಿಧ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ನಗರದ ಮುಖ್ಯ ಅಂಚೆ ಕಚೇರಿಗೆ ತೆರಳಿ ಗಂಟೆಗಟ್ಟಲೆ ಸಾಲಲ್ಲಿ ನಿಂತು ಪರದಾಡಿದ ಘಟನೆ ನಡೆಯಿತು.
ಪರೀಕ್ಷಾ ಶುಲ್ಕ ಪಾವತಿಸಲು ಜೂನ್ 3ರ ಗಡುವು: ಅಂಚೆ ಕಚೇರಿ ಮುಂದೆ ವಿದ್ಯಾರ್ಥಿಗಳ ಪರದಾಟ
ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಪದವಿ ಹಂತದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಸೆಮಿಸ್ಟರ್ ಪರೀಕ್ಷೆಗೆ ಶುಲ್ಕ ಪಾವತಿಸಲು ಇದೇ ಜೂನ್ 3 ರಂದು ಕೊನೆಯ ದಿನ ಎಂದು ಕಾಲೇಜಿನ ಸಿಬ್ಬಂದಿ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು ನಗರದ ಮುಖ್ಯ ಅಂಚೆ ಕಚೇರಿಗೆ ತೆರಳಿ ಗಂಟೆಗಟ್ಟಲೆ ಸಾಲಲ್ಲಿ ನಿಂತು ಪರದಾಡುತ್ತಿದ್ದಾರೆ.
ಅಂಚೆ ಕಚೇರಿ ಮುಂದೆ ವಿದ್ಯಾರ್ಥಿಗಳ ಪರದಾಟ
ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಪದವಿ ಹಂತದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ಸೆಮಿಸ್ಟರ್ ಪರೀಕ್ಷೆಗೆ ಶುಲ್ಕ ಪಾವತಿಸಲು ಇದೇ ಜೂನ್ 3 ರಂದು ಕೊನೆಯ ದಿನ ಎಂದು ಕಾಲೇಜಿನ ಸಿಬ್ಬಂದಿ ಸೂಚನೆ ನೀಡಿದ್ದಾರೆ.
ಹೀಗಾಗಿ ನಗರದ ಕೊಲ್ಲಿ ನಾಗೇಶ್ವರ ರಾವ್, ಚನ್ನಬಸವ ಸ್ವಾಮಿ ಮಹಿಳಾ ಕಾಲೇಜು, ರಾಮುಲು ಸ್ಮಾರಕ ವಿದ್ಯಾಲಯ, ಜೆಎಸ್ ಡಿಗ್ರಿ ಕಾಲೇಜು, ಸಂಕಲ್ಪ ಸ್ವತಂತ್ರ ಪದವಿ ಕಾಲೇಜು ಸೇರಿದಂತೆ ನಾನಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಪರದಾಡಿದರು.