ಗಂಗಾವತಿ(ಕೊಪ್ಪಳ):ನಾಯಕ ಜನಾಂಗದ ಹಿರಿಯ ಮುಖಂಡ, ಸಚಿವ ಬಿ.ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಗಬೇಕಿತ್ತು. ಆದರೆ ಬಿಜೆಪಿ ಸರ್ಕಾರಕ್ಕೆ ಫುಲ್ ಮೆಜಾರಿಟಿ ಸಿಕ್ಕದಿರುವುದರಿಂದ ಡಿಸಿಎಂ ಹುದ್ದೆ ಕೈತಪ್ಪಿತು ಎಂದು ಶಾಸಕ ಬಸವರಾಜ ದಡೇಸಗೂರು ಹೇಳಿದರು.
ಮೆಜಾರಿಟಿ ಇಲ್ಲದ ಕಾರಣ ಶ್ರೀರಾಮುಲುಗೆ ಡಿಸಿಎಂ ಹುದ್ದೆ ಕೈತಪ್ಪಿದೆ: ಶಾಸಕ ಬಸವರಾಜ
ಮುಂದಿನ ದಿನಗಳಲ್ಲಿ ಸಚಿವ ಶ್ರೀರಾಮುಲು ಡಿಸಿಎಂ ಆಗುತ್ತಾರೆ. ಯಡಿಯೂರಪ್ಪ ಮಾತು ಕೊಟ್ಟರೆ ಮುಗಿತು ಎಂದು ಶಾಸಕ ಬಸವರಾಜ ದಡೇಸಗೂರು ಹೇಳಿದ್ದಾರೆ.
ಶಾಸಕ ಬಸವರಾಜ ದಢೇಸ್ಗೂರು
ಗಂಗಾವತಿಯ ಕಾರಟಗಿಯಲ್ಲಿ ಕಂದಾಯ ಇಲಾಖೆಯಿಂದ ನಡೆದ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾದು ನೋಡಿ, ಸರ್ಕಾರದಿಂದ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಸಿಗಲಿದೆ. ಶ್ರೀರಾಮುಲು ಡಿಸಿಎಂ ಆಗುತ್ತಾರೆ. ಯಡಿಯೂರಪ್ಪ ಮಾತು ಕೊಟ್ಟರೆ ಮುಗಿತು, ಅದನ್ನು ಈಡೇರಿಸುತ್ತಾರೆ. ಆದರೆ ಸದ್ಯಕ್ಕೆ ಸರ್ಕಾರ ಸ್ವಲ್ಪ ಕಷ್ಟದಲ್ಲಿದೆ. ಹೀಗಾಗಿ ಬೇರೆ ಪಕ್ಷದವರ ಸಹಕಾರ ಪಡೆಯುವುದು ಅನಿವಾರ್ಯವಾಗಿತ್ತು ಎಂದರು.