ಕೊಪ್ಪಳ:ನಿಷೇಧಿತ ಕ್ಯಾಟ್ ಫಿಶ್ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕೊಪ್ಪಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣದ ಮೊಹಮ್ಮದ್ ಖಾನ್ ಹಾಗೂ ಮಧ್ಯಪ್ರದೇಶದ ಜಗಲಿ ದುರ್ವೆ ಬಂಧಿತ ಆರೋಪಿಗಳು.
ಮತ್ತೊಬ್ಬ ಆರೋಪಿ ಚಿಂತಾಮಣಿಯ ಮೊಹಮ್ಮದ್ ಇರ್ಫಾನ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಚಿಂತಾಮಣಿಯಿಂದ ಕೊಪ್ಪಳ ಜಿಲ್ಲೆಯ ಮಾರ್ಗವಾಗಿ ಇಂದೋರ್ಗೆ ವಾಹನವೊಂದರಲ್ಲಿ ಕ್ಯಾಟ್ ಫಿಶ್ಗಳನ್ನು ಸಾಗಾಟ ಮಾಡುತ್ತಿದ್ದರು. ಈ ವೇಳೆ ಕೊಪ್ಪಳ ಡಿವೈಎಸ್ಪಿ ಗೀತಾ ಬೇನಾಳ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ವಾಹನ ಜಪ್ತಿ ಮಾಡಿದ್ದಾರೆ.