ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಲೈಂಗಿಕ ಶೋಷಣೆ.. ಪೋಕ್ಸೋ ಅಡಿ ವ್ಯಕ್ತಿ ಪೊಲೀಸರ ವಶಕ್ಕೆ

ಮೂರನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗಳ ಮೇಲೆ ಗ್ರಾಮದ ಅಂಜಿನಪ್ಪ ಬಂಡಿ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

Gangavathi Police station
ಗಂಗಾವತಿ ಪೊಲೀಸ್​ ಠಾಣೆ

By

Published : Sep 9, 2022, 3:30 PM IST

ಗಂಗಾವತಿ:ಅಪ್ರಾಪ್ತೆಗೆ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಬಾಲಕಿಯ ತಾಯಿ ಯಲ್ಲಮ್ಮ (ಹೆಸರು ಬದಲಿಸಲಾಗಿದೆ) ಎಂಬುವವರು ಮಲ್ಲಾಪುರ ಗ್ರಾಮದ ಅಂಜಿನಪ್ಪ ಬಂಡಿ ಎಂಬ ವ್ಯಕ್ತಿಯ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಆರೋಪಿ ಅಂಜಿನಪ್ಪ ಬಂಡಿ

ತನ್ನ 9 ವರ್ಷದ ಮಗಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಸಹಜವಾಗಿ ಹಾಲು ತರಲು ಮನೆಯಿಂದ ಕಳುಹಿಸಿದ್ದೆ. ಇದೇ ಸಂದರ್ಭದಲ್ಲಿ ಅಂಜಿನಪ್ಪ ನನ್ನ ಮಗಳನ್ನು ಕರೆದು ತನಗೂ ಹಾಲು ತಂದು ಕೊಡುವಂತೆ ಕೇಳಿದ್ದಾನೆ. ಹಾಲಿಗಾಗಿ ಕ್ಯಾನು ನೀಡುವ ನೆಪದಲ್ಲಿ ಮಗಳನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ಶೋಷಣೆ ಮಾಡಲು ಯತ್ನಿಸಿದ್ದಾನೆ. ಇದರಿಂದ ಮಗಳು ಕೂಗಿಕೊಂಡಾಗ ಸುತ್ತಲಿನವರು ಸೇರಿ ಮಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:ಮಗಳ ಮೇಲೆ ಅತ್ಯಾಚಾರ!: ಅಪರಾಧಿ ತಂದೆಗೆ 15 ವರ್ಷಗಳ ಕಠಿಣ ಜೈಲು ಸಜೆ

ABOUT THE AUTHOR

...view details