ಕರ್ನಾಟಕ

karnataka

ETV Bharat / state

ತೋಟದ ಮನೆಗೆ ಕನ್ನ: 10 ಲಕ್ಷ ಮೌಲ್ಯದ ನಗನಾಣ್ಯ ದೋಚಿದ ಕಳ್ಳರು - ಗಂಗಾವತಿ ಕಳ್ಳತನ ಸುದ್ದಿ

ಸಣಾಪುರ ಗ್ರಾಮದ ನಿವಾಸಿ ಚಿರಂಜೀವಿ ರಾಮಕೋಟಯ್ಯ ಎಂಬ ಕೃಷಿಕನಿಗೆ ಸೇರಿದ ವಿರುಪಾಪುರ ಗಡ್ಡೆಯಲ್ಲಿನ ತೋಟದ ಮನೆಯಲ್ಲಿ ಕಳ್ಳತನವಾಗಿದ್ದು, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

gangavati
ತೋಟದ ಮನೆಗೆ ಕನ್ನ

By

Published : Jul 7, 2021, 11:46 AM IST

ಗಂಗಾವತಿ: ಕೃಷಿಕರೊಬ್ಬರ ತೋಟದ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ನುಗ್ಗಿದ ಕಳ್ಳರು, ತೋಟದಲ್ಲಿನ ತೆಂಗಿನಕಾಯಿ ಸಮೇತ ಮನೆಯಲ್ಲಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯ ದೋಚಿ ಪರಾರಿಯಾದ ಘಟನೆ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ನಡೆದಿದೆ.

ಸಣಾಪುರ ಗ್ರಾಮದ ನಿವಾಸಿ ಚಿರಂಜೀವಿ ರಾಮಕೋಟಯ್ಯ ಎಂಬ ಕೃಷಿಕನಿಗೆ ಸೇರಿದ ವಿರುಪಾಪುರ ಗಡ್ಡೆಯಲ್ಲಿನ ತೋಟದ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮೂರು ಲಕ್ಷ ರೂಪಾಯಿ ನಗದು, ಸುಮಾರು ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಚಿರಂಜೀವಿ ತನ್ನ ಪತ್ನಿಯೊಂದಿಗೆ ಸಣಾಪುರ ಗ್ರಾಮದಲ್ಲಿ ವಾಸವಾಗಿದ್ದು, ತೋಟದ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಆದರೆ ಯಾರೂ ಇಲ್ಲದ ಸಮಯ ಸಾಧಿಸಿದ ಕಳ್ಳರು, ತೋಟದಲ್ಲಿನ ತೆಂಗಿನ ಕಾಯಿ ಸಮೇತ ನಗ ನಾಣ್ಯದೊಂದಿಗೆ ಪರಾರಿಯಾಗಿದ್ದಾರೆ.

ABOUT THE AUTHOR

...view details