ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ರಸ್ತೆ ಅಪಘಾತ; ಬಿಜೆಪಿ ಹಿರಿಯ ನಾಯಕಿಗೆ ಗಾಯ - ಚಿತ್ರದುರ್ಗದ ದೊನ್ನೆಹಳ್ಳಿ

ಗಾಯಾಳುಗಳನ್ನು ಕನಕಗಿರಿ ವಿಧಾನಸಭಾ ಕ್ಷೇತ್ರದ 2023ರ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಹಿರಿಯ ನಾಯಕಿ ಪುಷ್ಪಾಂಜಲಿ ಗುನ್ನಾಳ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಹನುಮಂತಪ್ಪ ಗುನ್ನಾಳ ಎಂದು ಗುರುತಿಸಲಾಗಿದೆ.

road accident
ರಸ್ತೆ ಅಪಘಾತ

By

Published : Dec 11, 2022, 3:45 PM IST

ಗಂಗಾವತಿ(ಕೊಪ್ಪಳ): ಸಿಂಧನೂರಿನಲ್ಲಿ ಸೋಮವಾರದಂದು ನಡೆಯಲಿರುವ ಹಿಂದು ಜಾಗರಣ ವೇದಿಕೆಯ ತ್ರೈಮಾಸಿಕ ಪ್ರಾಂತೀಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ಗಂಗಾವತಿಯ ಬಿಜೆಪಿ ಹಿರಿಯ ನಾಯಕಿ ಸೇರಿದಂತೆ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಭಾನುವಾರ ಸಂಭವಿಸಿದೆ.

ಗಾಯಾಳುಗಳನ್ನು ಕನಕಗಿರಿ ವಿಧಾನಸಭಾ ಕ್ಷೇತ್ರದ 2023ರ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಹಿರಿಯ ನಾಯಕಿ ಪುಷ್ಪಾಂಜಲಿ ಗುನ್ನಾಳ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಹನುಮಂತಪ್ಪ ಗುನ್ನಾಳ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಚಿತ್ರದುರ್ಗದ ದೊನ್ನೆಹಳ್ಳಿ ಎಂಬಲ್ಲಿ ರಸ್ತೆ ಅಪಘಾತವಾಗಿದೆ. ಕಾರಿನಲ್ಲಿದ್ದ ಒಟ್ಟು ನಾಲ್ಕು ಜನರ ಪೈಕಿ ಚಾಲಕ ಹಾಗೂ ಪುಷ್ಪಾಂಜಲಿ ಅವರ ಪುತ್ರನಿಗೆ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ.

ಇದನ್ನೂ ಓದಿ:ಊಟದಲ್ಲಿ ತಲೆಕೂದಲು ಸಿಕ್ಕಿದ್ದಕ್ಕೆ ಪತ್ನಿಯ ಕೇಶಮುಂಡನ ಮಾಡಿದ ಪತಿ!

ABOUT THE AUTHOR

...view details