ಗಂಗಾವತಿ: ತಾಲೂಕಿನ ಐತಿಹಾಸಿಕ, ಪ್ರವಾಸಿ ಹಾಗೂ ಧಾರ್ಮಿಕ ತಾಣವಾದ ಆನೆಗೊಂದಿಯ ರಂಗನಾಥ ದೇಗುಲ ಹಾಗೂ ಪಂಪಾಸರೋವರದ ಲಕ್ಷ್ಮಿ ದೇಗುಲಕ್ಕೆ ಸೇರಿದ ಕೃಷಿ ಜಮೀನನ್ನು ಹರಾಜು ಹಾಕಲು ಕಂದಾಯ ಇಲಾಖೆ ಮುಂದಾಗಿದೆ.
ಆನೆಗೊಂದಿ ದೇವಸ್ಥಾನ ಭೂಮಿ ಹರಾಜಿಗೆ ಮುಂದಾದ ಕಂದಾಯ ಇಲಾಖೆ - ಆನೆಗೊಂದಿ ದೇವಸ್ಥಾನ
ಆನೆಗೊಂದಿಯ ಕೃಷಿ ಜಮೀನನ್ನು ಬಹಿರಂಗವಾಗಿ ಹರಾಜು ಹಾಕಲು ಕಂದಾಯ ಇಲಾಖೆ ಮುಂದಾಗಿದ್ದು, ಜು.9ರಂದು ಬೆಳಗ್ಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.
ಆನೆಗೊಂದಿ ದೇವಳದ ಕೃಷಿ ಜಮೀನು
ಉಭಯ ದೇಗುಲಗಳಿಗೆ ಸೇರಿದ 30.36 ಎಕರೆ ಜಮೀನುಗಳನ್ನು ಮುಂದಿನ ಮೂರು ವರ್ಷದ ಅವಧಿಗೆ ಹರಾಜು ಮೂಲಕ ಪಡೆದುಕೊಳ್ಳಲು ಆಸಕ್ತ ರೈತರು ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಜು.9ರಂದು ಬೆಳಗ್ಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.
ಮುಂದಿನ ಮೂರು ವರ್ಷದ ಅವಧಿಗೆ ಹರಾಜು ನಡೆಯಲಿದ್ದು, ಅತಿ ಹೆಚ್ಚು ಮೊತ್ತಕ್ಕೆ ಹರಾಜು ಕೂಗುವ ರೈತರಿಗೆ ಭೂಮಿ ಕಬ್ಜಾ ನೀಡಲಾಗುವುದು. ಬರುವ ಆದಾಯವನ್ನು ದೇಗುಲದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.