ಗಂಗಾವತಿ (ಕೊಪ್ಪಳ):ತಾಲೂಕಿನ ಮರಳಿ ಗ್ರಾಮದ ಟೋಲ್ ಪ್ಲಾಜಾದ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಂಗಳಮುಖಿಯೊಂದಿಗೆ ವ್ಯಕ್ತಿಯೊಬ್ಬ ವಿನಾಕಾರಣ ಗಲಾಟೆ ತೆಗೆದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳಿ ಗ್ರಾಮದ ತಿಪ್ಪೇಸ್ವಾಮಿ ತಿಮ್ಮಪ್ಪ ಕಮ್ಮಾರ ಹಾಗೂ ಹೊಸಕೇರಿ ಗ್ರಾಮದ ಅನುಶ್ರೀ ಲಂಕೆಪ್ಪ ಎಂಬ ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ಆರಂಭವಾಗಿದೆ. ಬಳಿಕ ಮಾತಿನ ಚಕಮಕಿ ಕೈಮಿಲಾಯಿಸುವ ಹಂತಕ್ಕೆ ಹೋಗಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರಿಗೂ ಗಾಯಗಳಾಗಿವೆ.