ಕರ್ನಾಟಕ

karnataka

ETV Bharat / state

ಕೊಪ್ಪಳ: ಲಾರಿಗಳ ಹಾವಳಿ, ಚಾಲಕರ ವಿರುದ್ಧ ಸಾರ್ವಜನಿಕರ ಆಕ್ರೋಶ - Public outrage

ಕೊಪ್ಪಳದಿಂದ ಭಾಗ್ಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಲಾರಿಗಳ ಹಾವಳಿ ಹೆಚ್ಚಾಗಿದ್ದು, ಬಹಳಷ್ಟು ಜನರು ಹಾಗೂ ಸಣ್ಣ ವಾಹನಗಳು ಇದೇ ರಸ್ತೆಯ ಮೂಲಕ ಸಂಚರಿಸುವುದರಿಂದ ನಿತ್ಯವೂ ಕಿರಿಕಿರಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾರಿಗಳ ಹಾವಳಿ
ಲಾರಿಗಳ ಹಾವಳಿ

By

Published : Jan 6, 2021, 8:49 PM IST

ಕೊಪ್ಪಳ:ರೈಲ್ವೆ ಮೇಲ್ಸೆತುವೆ ಮೂಲಕ ಕೊಪ್ಪಳದಿಂದ ಭಾಗ್ಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಲಾರಿಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿ ಸಂಚರಿಸುವ ವಾಹನ ಸವಾರರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.

ರೈಲ್ವೆ ವ್ಯಾಗನ್ ಮೂಲಕ ಬಂದ ಅಕ್ಕಿ, ಗೋಧಿ, ರಾಸಾಯನಿಕ ಗೊಬ್ಬರಗಳನ್ನು ಹೊತ್ತುಕೊಂಡು ನೂರಾರು ಲಾರಿಗಳು ಈ ಸೇತುವೆಯ ಮೂಲಕ ತೆರಳಲು ಭಾಗ್ಯನಗರದ ಮುಖ್ಯ ರಸ್ತೆಯಲ್ಲಿಯೇ ಯೂಟರ್ನ್ ತೆಗೆದುಕೊಳ್ಳುತ್ತವೆ. ರಸ್ತೆ ಚಿಕ್ಕದಾಗಿರುವುದರಿಂದ ದೊಡ್ಡ ಲಾರಿ ಚಾಲಕರು ಯೂ ಟರ್ನ್ ತೆಗೆದುಕೊಳ್ಳಲು ಹರಸಾಹಸ ಪಡುತ್ತಾರೆ. ಇದರಿಂದಾಗಿ ಇಲ್ಲಿ ಟ್ರಾಫಿಕ್ ಹೆಚ್ಚಾಗಿದ್ದು ಸಣ್ಣ ವಾಹನಗಳ ಸವಾರರು ಲಾರಿ ಚಾಲಕರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಾರಿಗಳ ಹಾವಳಿ

ಲಾರಿಯವರು ಯಾವ ಕಡೆ ತಿರುಗುತ್ತಾರೆ ಎಂಬುದು ಕೆಲವೊಮ್ಮೆ ತಿಳಿಯುವುದೇ ಇಲ್ಲ. ಇದರಿಂದಾಗಿ ಅಪಘಾತದ ಸಂಭವವೂ ಇರುತ್ತದೆ. ನಿತ್ಯವೂ ನೂರಾರು ಲಾರಿಗಳು ವ್ಯಾಗಿನ್ ಬಂದಾಗ ಓಡಾಡುತ್ತವೆ. ಭಾಗ್ಯನಗರದ ಪಟ್ಟಣದಿಂದ ಕೊಪ್ಪಳಕ್ಕೆ ಬಹಳಷ್ಟು ವಾಹನಗಳು ಇದೇ ರಸ್ತೆಯ ಮೂಲಕ ಸಂಚರಿಸುವುದರಿಂದಾಗಿ ನಿತ್ಯವೂ ಕಿರಿಕಿರಿಯುಂಟಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ABOUT THE AUTHOR

...view details