ಕುಷ್ಟಗಿ (ಕೊಪ್ಪಳ): ಬೆಳಗಾವಿ ಜಿಲ್ಲೆ ಪೀರನವಾಡಿ ಗ್ರಾಮದಲ್ಲಿ ತೆರವುಗೊಳಿಸಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಪುನರ್ ಸ್ಥಾಪಿಸುವಂತೆ ತಹಶೀಲ್ದಾರ್ಗೆ ಮನವಿ
ಬೆಳಗಾವಿ ಜಿಲ್ಲೆ ಪೀರನವಾಡಿ ಗ್ರಾಮದಲ್ಲಿ ತೆರವುಗೊಳಿಸಲಾದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆಯನ್ನು ಮರು ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
ಕೆಚ್ಚದೆಯ ಸ್ವಾತಂತ್ರ್ಯ ಸೇನಾನಿ, ದೇಶಕ್ಕಾಗಿ ಬಲಿದಾನ ಗೈದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆಯನ್ನು ಆಗಸ್ಟ್ 15ರಂದು ತೆರವುಗೊಳಿಸಿರುವುದು ಖಂಡನಾರ್ಹ. ಇನ್ನು ಎರಡ್ಮೂರು ದಿನಗಳಲ್ಲಿ ಪ್ರತಿಮೆಯನ್ನು ಪುನರ್ ನಿರ್ಮಿಸಬೇಕು ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಸಂಘಟನೆ ಕಾರ್ಯಕರ್ತರು ಎಚ್ಚರಿಸಿದರು.ಇದೇ ವೇಳೆ ಛತ್ರಪತಿ ಶಿವಾಜಿ ಸೇವಾ ಸಂಘ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಉಪ ತಹಶೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ ನಾಲಗಾರ, ಛತ್ರಪತಿ ಶಿವಾಜಿ ಸೇವಾ ಸಂಘದ ಪ್ರವೀಣ ಕಾಲಾಲ್, ರವಿಚಂದ್ರ ತಾಳದ್, ಹನುಮೇಶ ಟಕ್ಕಳಕಿ, ಸಂಜು ಶಿವಾಜಿ, ಮಹಾಂತೇಶ ರಾಥೋಡ್, ಸಾಗರ್ ಕಲಾಲ್, ಗೌಡಪ್ಪ ಮೇಟಿ, ರಮೇಶ ಬಿಂಜವಾಡಗಿ, ನಾಗರಾಜ್ ಕಟ್ಟಿಹೊಲ, ನಾಗರಾಜ ಮುರ್ಲಿ ಇತರರು ಇದ್ದರು.