ಕೊಪ್ಪಳ: ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆಗಳನ್ನು ವಿರೋಧಿಸಿ, ಜನವರಿ 24 ರಂದು ಜನಾಗ್ರಹ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಯಲ್ಲಪ್ಪ ಬಳಗಾನೂರು ಹೇಳಿದರು.
ಸಿಎಎ ವಿರುದ್ಧ ಜನವರಿ 24 ರಂದು ಕೊಪ್ಪಳದಲ್ಲಿ ಧರಣಿ
ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆಗಳನ್ನು ವಿರೋಧಿಸಿ, ಜನವರಿ 24 ರಂದು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಯಲ್ಲಪ್ಪ ಬಳಗಾನೂರು ಹೇಳಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆಯನ್ನು ಜಾರಿಗೊಳಿಸಿದೆ. ಇದು ನಮ್ಮ ಸಂವಿಧಾನದ ಪರಿಚ್ಛೇದ 14ರ ವಿರುದ್ಧವಾಗಿದೆ ಎಂದರು. ಪರಿಚ್ಛೇದ 14 ರನ್ವಯ ಎಲ್ಲರೂ ಸಮಾನರು. ಆದರೆ ಸಿಎಎ, ಎನ್ಆರ್ಸಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದಾಗಿದೆ ಎಂದು ಆರೋಪಿಸಿದರು.
ಈ ಮೂರು ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಸಮಿತಿಯ ಕರೆ ಮೇರೆಗೆ, ಜನವರಿ 24 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಯಲಿದೆ. ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ. ನೂರಾರು ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಶ್ರವಣಕುಮಾರ್ ಹಾಗೂ ರಮೇಶ ಬೆಲ್ಲದ್ ಉಪಸ್ಥಿತರಿದ್ದರು.
TAGGED:
ಕರ್ನಾಟಕ ದಲಿತ ಸಂಘರ್ಷ ಸಮಿತಿ